ADVERTISEMENT

ಮಧ್ಯರಾತ್ರಿ ನನ್ನ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ನವಾಜುದ್ದೀನ್‌: ಪತ್ನಿ ಆಲಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2023, 10:59 IST
Last Updated 4 ಮಾರ್ಚ್ 2023, 10:59 IST
   

ಹೈದರಾಬಾದ್‌: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಅವರು ನನ್ನ ಮತ್ತು ಮಕ್ಕಳನ್ನು ಮಧ್ಯ ರಾತ್ರಿಯೇ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಆಲಿಯಾ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ವಿಡಿಯೊ ಪೋಸ್ಟ್‌ ಹಾಕಿದ್ದಾರೆ. ಮಧ್ಯ ರಾತ್ರಿ ತಮ್ಮ ಮನೆಯ ಎದುರೇ ವಿಡಿಯೊ ಮಾಡಿರುವ ಅವರು ಮಕ್ಕಳೊಂದಿಗೆ ನನ್ನ ಮನೆಯಿಂದ ಹೊರ ಹಾಕಿದ್ದಾರೆ ಎಂದು ಹೇಳಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ನಡುವಿನ ವಿಚ್ಛೇದನದ ಜಗಳ ಈಗ ಮತ್ತಷ್ಟು ಉಲ್ಬಣಗೊಂಡಿದೆ. ಇಬ್ಬರು ಕೆಲವು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರಕರಣ ಇತ್ಯಾರ್ಥಗೊಂಡಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಆಲಿಯಾ ಎರಡು ವಿಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಒಂದು ವಿಡಿಯೊದಲ್ಲಿ ನವಾಜುದ್ದೀನ್ ಸಿದ್ದಿಕಿ ನನ್ನ ಮನೆಯಿಂದ ಹೊರ ಹಾಕಿದ್ದಾರೆ ಎಂದು ತಮ್ಮ ನಿವಾಸದ ಗೇಟಿನ ಮುಂದೆ ನಿಂತು ವಿಡಿಯೊ ಮಾಡಿದ್ದಾರೆ. ಈಗ, ನಾನು ಮಕ್ಕಳೊಂದಿಗೆ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುವುದಾಗಿ ಹೇಳಿ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ನನಗೆ ಅನ್ಯಾಯಾ ಮಾಡಿ, ಹಿಂಸೆ ಕೊಟ್ಟಿದ್ದಾರೆ. ಸ್ವಂತ ಮಕ್ಕಳಿಗೂ ಕಷ್ಟ ಕೊಟ್ಟಿದ್ದಾರೆ. ಅವರನ್ನು ನಾನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ವಿವರವಾದ ಪತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ನವಾಜುದ್ದೀನ್ ಮತ್ತು ಆಲಿಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಶೋರಾ ಮತ್ತು ಮಗ ಯಾನಿ. ಆಲಿಯಾ ಮಾಡಿರುವ ವಿಡಿಯೊದಲ್ಲಿ ಶೋರಾ ಅಳುತ್ತಿದ್ದರೇ, ಯಾನಿ ಭಯದಿಂದ ಆಲಿಯಾರನ್ನು ತಬ್ಬಿಕೊಂಡಿದ್ದಾನೆ.

ನವಾಜುದ್ದೀನ್ ಸಿದ್ದಿಕಿ ಅವರ ನಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.

ಆಲಿಯಾ ಹಾಗೂ ಮಕ್ಕಳನ್ನು ನವಾಜುದ್ದೀನ್ ಮನೆಯೊಂದ ಹೊರ ಹಾಕಿಲ್ಲ, ಅವರೇ ಹೊರಗೆ ಬಂದು ಗಲಾಟೆ ಮಾಡಿದ್ದಾರೆ ಎಂದು ನವಾಜುದ್ದೀನ್‌ ಆಪ್ತರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.