ನವದೆಹಲಿ: ಇತ್ತೀಚೆಗಷ್ಟೇ ಮದುವೆಯಾದಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ಜೋಡಿ ಹನಿಮೂನ್ಗಾಗಿ ಥೈಲ್ಯಾಂಡ್ಗೆ ತೆರಳಿದ್ದಾರೆ.
ಇದೀಗ ನಯನತಾರಾ ಜೊತೆಗಿನ ಹೊಸ ಫೋಟೊವೊಂದನ್ನು ನಿರ್ದೇಶಕ ವಿಘ್ನೇಶ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇನ್ ಥೈಲ್ಯಾಂಡ್ ವಿತ್ ಮೈ ಥಾರಾಮ್’ ಎಂದು ಬರೆದುಕೊಂಡಿದ್ದಾರೆ.
ಫೋಟೊದಲ್ಲಿ ನಯನತಾರಾ ಹಳದಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಮತ್ತೊಂದೆಡೆ, ವಿಘ್ನೇಶ್ ಕಪ್ಪು ಬಣ್ಣದ ಟೀ- ಶರ್ಟ್ನಲ್ಲಿ ಗಮನ ಸೆಳೆದಿದ್ದಾರೆ.
ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ವಿಕ್ಕಿ ಕ್ಲಿಕ್ಗಳು ಅತ್ಯುತ್ತಮವಾಗಿವೆ’ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹೃದಯದ ಎಮೋಜಿಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಜೂನ್ 9ರಂದು ನಯನತಾರಾ –ವಿಘ್ನೇಶ್ ಶಿವನ್ ಚೆನ್ನೈನ ಖಾಸಗಿ ರೆಸಾರ್ಟ್ವೊಂದರಲ್ಲಿ ಮದುವೆಯಾಗಿದ್ದರು.
ಸಿನಿಮಾ ಪ್ರಚಾರದ ಬಗ್ಗೆ ಹೇಳುವುದಾದರೆ ನಯನತಾರಾ ಅವರುತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ‘ಗಾಡ್ ಫಾದರ್’, ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ‘ಗೋಲ್ಡ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.