ಚೆನ್ನೈ: ಬಹುಭಾಷಾ ನಟಿ ನಯನತಾರಾ ಮತ್ತು ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ದಂಪತಿಗೆ ಭಾನುವಾರ ಅವಳಿ ಗಂಡು ಮಕ್ಕಳು ಜನಿಸಿವೆ.
ನಯನತಾರಾ ಮತ್ತು ವಿಘ್ನೇಶ್ ಅವರು ಮಕ್ಕಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಉಯಿರ್ (ಉಸಿರು), ಉಲಗಮ್ (ಜಗತ್ತು) ಎಂದು ಮಕ್ಕಳನ್ನು ಹೆಸರಿಸಿರುವುದಾಗಿ ದಂಪತಿ ಹೇಳಿಕೊಂಡಿದ್ದಾರೆ.
‘ನಮ್ಮ ಎಲ್ಲಾ ಪ್ರಾರ್ಥನೆಗಳು...ನಮ್ಮ ಪೂರ್ವಜರ ಆಶೀರ್ವಾದಗಳೆಲ್ಲವೂ ಒಳ್ಳೆಯ ಅಭಿವ್ಯಕ್ತಿಯೊಂದಿಗೆ ಸಮ್ಮಿಲನಗೊಂಡಿವೆ. ಆ ಆಶೀರ್ವಾದಗಳೆಲ್ಲವೂ ಎರಡು ಶಿಶುಗಳ ರೂಪದಲ್ಲಿ ನಮಗಾಗಿ ಒಟ್ಟಿಗೆ ಬಂದಿವೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.