ಮುಂಬೈ: ನಟಿ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ದಾಸವಾಳ ಚಹಾದ ಕುರಿತ ಪೋಸ್ಟ್ ಈಗ ವಿವಾದಕ್ಕೆ ಸಿಲುಕಿದೆ.
ಸಾಮಾಜಿಕ ಜಾಲತಾಣದಲ್ಲಿ ಲಿವರ್ ಡಾಕ್ಟರ್ ಎಂದೇ ಹೆಸರು ಪಡೆದಿರುವ ಸೈರಿಕ್ ಅಬೆ ಫಿಲಿಫ್ಸ್ ಎನ್ನುವವರು ನಯನತಾರಾ ಪೋಸ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ನಯನತಾರಾ ಅವರು, ‘ದಾಸವಾಳ ಚಹಾ ಮಳೆಗಾಲದಲ್ಲಿ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್‌ಗಳು ಹೆಚ್ಚಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಋತುಮಾನದ ಅಸ್ವಸ್ಥತೆಯಿಂದ, ಮಧುಮೇಹ, ಅಧಿಕ ರಕ್ತದೊತ್ತಡ, ಮೊಡವೆ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಜ್ವರದಿಂದ ರಕ್ಷಿಸುತ್ತದೆ ಎಂದು ಬರೆದುಕೊಂಡು ಅದನ್ನು ಹೇಗೆ ತಯಾರಿಸುವುದು ತಿಳಿಯಿರಿ’ ಎಂದು munmun.ganeriwal. ಎನ್ನುವವರನ್ನು ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಫಿಲಿಫ್ಸ್ ‘ದಾಸವಾಳ ಚಹಾ ಇಷ್ಟೆಲ್ಲ ಮಾಡುತ್ತದೆ ಎನ್ನುವುದು ಎಲ್ಲಿಯೂ ಸಾಬೀತಾಗಿಲ್ಲ’ ಎಂದು ಬರೆದುಕೊಂಡಿದ್ದಾರೆ. ‘ಸೆಲೆಬ್ರಿಟಿಗಳ ಈ ರೀತಿಯ ನಡವಳಿಕೆಯನ್ನು ನಿಗ್ರಹಿಸಲು ಕಾನೂನುಗಳ ಅಗತ್ಯವಿದೆ. ಆರೋಗ್ಯಕರ ಆಹಾರದ ಆಯ್ಕೆಯ ಬಗ್ಗೆ ತಿಳಿಸಲು, ಪುರಾವೆ ಆಧಾರಿತ ವೈಜ್ಞಾನಿಕ ಶಿಕ್ಷಣವನ್ನು ಒದಗಿಸಲು ನೋಂದಾಯಿತ ವೈದ್ಯರಿಗೆ (ಆಯುಷ್ ಅಲ್ಲದ) ಅಧಿಕಾರ ಮತ್ತು ಬೆಂಬಲ ನೀಡಬೇಕು’ ಎಂದು ಹೇಳಿದ್ದಾರೆ.
ಇತ್ತ ನಯನತಾರ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡು, ಮೂರ್ಖರೊಂದಿಗೆ ವಾದ ಮಾಡಬೇಡಿ, ಅವರು ಅವರ ಹಂತಕ್ಕೆ ಇಳಿಸುತ್ತಾರೆ ಬಳಿಕ ಅನುಭವದ ಮೂಲಕ ಹೊಡೆಯುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಸ್ಟೋರಿಯಲ್ಲಿ ‘ಯಾರಿಗೆಲ್ಲ ವಿವರಣೆ ಬೇಕು ತೆಗೆದುಕೊಳ್ಳಿ’ ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.