ಚೆನ್ನೈ: ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ‘ರೌಡಿ ಪಿಕ್ಚರ್ಸ್’ ಬ್ಯಾನರ್ನಡಿ ಮೊದಲ ಬಾರಿಗೆ ಗುಜರಾತಿನ ‘ಶುಭ್ ಯಾತ್ರಾ’ ಚಿತ್ರವನ್ನು ನಿರ್ಮಿಸುತ್ತಿದ್ದು, ಇದೇ ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಪ್ರೊಡಕ್ಷನ್ ಬ್ಯಾನರ್ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ.
'ನಮ್ಮ ಮೊದಲ ಗುಜರಾತಿ ಚಿತ್ರ ‘ಶುಭ್ ಯಾತ್ರಾ’ ಏಪ್ರಿಲ್ 28 ರಂದು ಥಿಯೇಟರ್ಗಳಲ್ಲಿ ಬರಲು ಸಿದ್ಧವಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮನೀಷ್ಸೈನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೈನಿ ಚಿತ್ರ ಕಥೆಯನ್ನು ಬರೆದಿದ್ದಾರೆ. ಮಲ್ಹರ್ ಥಾಕರ್, ಮೊನಾಲ್ ಗಜ್ಜರ್, ದರ್ಶನ್ ಜರಿವಾಲ್ಲಾ, ಹಿಟು ಕನೋಡಿಯಾ, ಅರ್ಚನ್ ತ್ರಿವೇದಿ ಸೇರಿದಂತೆ ಜೇ ಭಟ್ ನಟಿಸಿದ್ದಾರೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.