ADVERTISEMENT

ಹೊಸ ಸಿನಿಮಾ: ಹೆಸರಿಡದ ಚಿತ್ರದಲ್ಲಿ ಗುರುನಂದನ್‌...

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 1:14 IST
Last Updated 27 ಸೆಪ್ಟೆಂಬರ್ 2024, 1:14 IST
ಚಿತ್ರತಂಡ
ಚಿತ್ರತಂಡ   

‘ಫಸ್ಟ್‌ ರ‍್ಯಾಂಕ್‌ ರಾಜು’ ಖ್ಯಾತಿಯ ನಟ ಗುರುನಂದನ್‌ ಇತ್ತೀಚೆಗಷ್ಟೇ ಇನ್ನೂ ಹೆಸರಿಡದ ಸಿನಿಮಾ ಘೋಷಿಸಿದ್ದರು. ತಮ್ಮದೇ  ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಕೈಗೆತ್ತಿಕೊಂಡಿದ್ದರು. ಇದೀಗ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

ಸುಮಂತ್ ಗೌಡ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಅವರ ಮೊದಲ ಚಿತ್ರವಿದು. ಶಿವಸೇನಾ ಛಾಯಾಚಿತ್ರಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶನವಿದೆ. 

‘ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಪೂರ್ಣಗೊಂಡಿದೆ. ಚಿಕ್ಕಮಗಳೂರು, ಲಡಾಕ್‌ನಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಸ್ಟಾಂಡಪ್‌ ಕಾಮಿಡಿಯನ್‌ ಕುರಿತಾದ ಸಿನಿಮಾವಿದು’ ಎಂದಿದ್ದಾರೆ ನಿರ್ದೇಶಕರು.

ADVERTISEMENT

‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತಪಸ್ವಿನಿ ಪೂಣ್ಣಚ್ಚ ಗುರುನಂದನ್‌ಗೆ ಜೋಡಿಯಾಗಿದ್ದಾರೆ . ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.