ADVERTISEMENT

ಬಾಲಿವುಡ್‌ | ಅಭಿಷೇಕ್–ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು: ಇದಕ್ಕೆ ಕಾರಣ ಆ ನಟಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2024, 10:18 IST
Last Updated 21 ಅಕ್ಟೋಬರ್ 2024, 10:18 IST
<div class="paragraphs"><p>ಐಶ್ವರ್ಯಾ ರೈ ಬಚ್ಚನ್‌ ಹಾಗೂ ಅಭಿಷೇಕ್‌ ಬಚ್ಚನ್‌</p></div>

ಐಶ್ವರ್ಯಾ ರೈ ಬಚ್ಚನ್‌ ಹಾಗೂ ಅಭಿಷೇಕ್‌ ಬಚ್ಚನ್‌

   

ಬೆಂಗಳೂರು: ಬಾಲಿವುಡ್‌ನ ಖ್ಯಾತ ತಾರಾ ದಂಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯದ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಗಾಳಿ ಮಾತುಗಳು ಹರಿದಾಡುತ್ತಿವೆ.

ಕಳೆದೊಂದು ವರ್ಷದಿಂದ ಐಶ್ವರ್ಯಾ ರೈ ಮಗಳೊಂದಿಗೆ ತಮ್ಮ ತಾಯಿ ಮನೆಯಲ್ಲಿ ವಾಸವಾಗಿರುವುದು ಇಂತಹ ಗಾಳಿ ಸುದ್ದಿಗಳು ಹರಡಲು ಕಾರಣವಾಗಿವೆ. ಈಗಾಗಲೇ ಈ ದಂಪತಿ ವಿಚ್ಛೇದನ ಪಡೆದಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಇದನ್ನು ಕೆಲವರು ಅಲ್ಲಗಳೆದಿದ್ದಾರೆ. 

ADVERTISEMENT

ಹಿಂದೆ ಅವರು ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಕುಟುಂಬ ಸಮೇತರಾಗಿ ಹೋಗುತ್ತಿದ್ದರು. ಕಳೆದ ಕೆಲವು ತಿಂಗಳುಗಳ ಹಿಂದೆ ಈ ದಂಪತಿ ಪ್ರತ್ಯೇಕವಾಗಿ ಹೋಗುತ್ತಿದ್ದಾರೆ.

ಅನಂತ್‌ ಅಂಬಾನಿ– ರಾಧಿಕಾ ಮರ್ಚೆಂಟ್‌ ಅವರ ಮದುವೆ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ಮಗಳು ಆರಾಧ್ಯ ಭಾಗಿಯಾಗಿದ್ದರು. ಮತ್ತೊಂದೆಡೆ ಬಚ್ಚನ್‌ ಕುಟುಂಬ ಸದಸ್ಯರೆಲ್ಲರೂ ಪ್ರತ್ಯೇಕವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಭಿಷೇಕ್ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಲು ಬಾಲಿವುಡ್​ನ ನಟಿಯೊಬ್ಬರು ಕಾರಣ ಎಂದು ಬಾಲಿವುಡ್‌ ಮೂಲಗಳು ಹೇಳಿವೆ. ಅಭಿಷೇಕ್ ಆ ನಟಿಯ ಜೊತೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಐಶ್ವರ್ಯಾ ಮಗಳೊಂದಿಗೆ ತಾಯಿ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಅಭಿಷೇಕ್ ಕುಟುಂಬದ ಆಪ್ತರು ಹೇಳಿದ್ದಾರೆ.

ಆದರೆ ಈವರೆಗೂ ಐಶ್ವರ್ಯಾರಾಗಲಿ ಅಥವಾ ಅಭಿಷೇಕ್‌ ಬಚ್ಚನ್‌ ಪ್ರತ್ಯೇಕವಾಸ ಅಥವಾ ವಿಚ್ಛೇದನದ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಈ ಬಗ್ಗೆ ಅವರ ಕುಟುಂಬದ ಯಾರೊಬ್ಬರೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

ನಟಿ ಹಾಗೂ ರೂಪದರ್ಶಿ ನಮೃತಾ ಕೌರ್ ಜೊತೆ ಅಭಿಷೇಕ್‌ ರಿಲೇಶನ್​ಶಿಪ್ ಹೊಂದಿದ್ದಾರೆ ಎಂದು ಬಾಲಿವುಡ್‌ ಬಲ್ಲ ಮೂಲಗಳು ಹೇಳಿವೆ. ಈ ವಿಚಾರ ಐಶ್ವರ್ಯಾ, ಅಭಿಷೇಕ್‌ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ಇದು ನಿಜ ಆಗದೇ ಇರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.