ಕ್ರಿಸ್‌ಮಸ್ ಮೂಡ್‌ನಲ್ಲಿದ್ದಾರೆ ಟಾಲಿವುಡ್ ಹುಡುಗಿ ನಿವೇತಾ ಥಾಮಸ್. ಡಿಸೆಂಬರ್ ಮೊದಲ ವಾರದಿಂದಲೇ ಕ್ರಿಸ್‌ಮಸ್‌ಗೆ ಅವರ ಸಿದ್ಧತೆ ಆರಂಭವಾಗಿದೆ. ಅಂದಹಾಗೆ ಅವರು ಈ ಬಾರಿ ಕ್ರಿಸ್‌ಮಸ್ ಆಚರಿಸುತ್ತಿರುವುದು ದುಬೈನಲ್ಲಿ. ಕ್ರಿಸ್‌ಮಸ್ ವೇಳೆಗೆ ಕುಟುಂಬದವರೊಂದಿಗೆ ಕಾಲ ಕಳೆಯುವುದು ನಿವೇತಾ ಬೆಳೆಸಿಕೊಂಡ ಪದ್ಧತಿ. ನಿವೇತಾ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಅಪ್ಪ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರಿಸ್‌ಮಸ್ ವೇಳೆ ಒಂದೋ ಅಪ್ಪ ಊರಿಗೆ ಬರಬೇಕು. ಇಲ್ಲವಾದರೆ ನಿವೇತಾ ದುಬೈಗೆ ಹೋಗಬೇಕು. ಈ ಬಾರಿ ನಿವೇತಾ ದುಬೈಗೆ ಹೋಗಿದ್ದಾರೆ.
ಕ್ರಿಸ್‌ಮಸ್ ಸಡಗರವೂ ನಿವೇತಾ ಮನೆಯಲ್ಲಿ ಜೋರಾಗಿರುತ್ತದೆಯಂತೆ. ಮನೆ ಸ್ವಚ್ಛ ಮಾಡುವುದು. ಅಲಂಕರಿಸುವುದು, ಸಿಹಿ ತಿನಿಸು ತಯಾರಿಸುವುದು ನಡೆಯುತ್ತದೆ. ಚರ್ಚ್‌ಗೆ ಎಲ್ಲರೂ ಒಟ್ಟಾಗಿ ಹೋಗುತ್ತಾರೆ. ಅಲ್ಲಿ ಪ್ರಾರ್ಥನೆ ಮುಗಿಸಿ ಬರುತ್ತೇವೆ. ತಿನಿಸುಗಳನ್ನು ಅಮ್ಮ ಅಕ್ಕಪಕ್ಕದ ಮನೆಯವರಿಗೆ ಹಂಚುತ್ತಾರೆ ಎಂದು ನಿವೇತಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಚೆನ್ನೈನಲ್ಲಿ ಕ್ರಿಸ್‌ಮಸ್ ದಿನಗಳನ್ನು ನೆನಪಿಸಿಕೊಂಡಿರುವ ನಿವೇತಾ, ‘ನಾನು ಚರ್ಚ್‌ನಲ್ಲಿ ಕಾಯರ್ (ಗಾಯನ) ತಂಡದ ಭಾಗವಾಗಿದ್ದೆ. ಕ್ರಿಸ್ತನ ಸ್ತುತಿಗೀತೆ ಹಾಡುವುದು ನನಗಿಷ್ಟ. ಕ್ರಿಸ್‌ಮಸ್ ಮರ, ಗೋದಲಿ ಇತ್ಯಾದಿಗಳನ್ನು ಬೆರಗಿನಿಂದ ನೋಡುವುದೇ ಅದ್ಭುತ ಅನುಭವ’ ಎಂದಿದ್ದಾರೆ ನಿವೇತಾ.
ಅಮ್ಮ ಚಿಕನ್ ಮತ್ತು ಆಪ್ಪಂ ಖಾದ್ಯ ಮಾಡುತ್ತಾರೆ. ಅದು ನನಗಿಷ್ಟ. ಈ ಬಾರಿ ಎಲ್ಲ ಸಂಭ್ರಮಗಳಿಗೆ ಕೋವಿಡ್ ತಡೆಯೊಡ್ಡಿದೆ. ನಿಯಮ ಪಾಲಿಸುತ್ತಾ ಬದಲಾವಣೆಗೆ ಒಡ್ಡಿಕೊಳ್ಳಲೇಬೇಕಲ್ಲಾ. ಸುರಕ್ಷತೆಗೆ ಆದ್ಯತೆ ಕೊಡಲೇಬೇಕು ಎನ್ನುತ್ತಾರೆ ಅವರು.
ಮುಂದಿನ ವರ್ಷ ಪವನ್‌ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಚಿತ್ರದಲ್ಲಿ ನಿವೇತಾ ಕಾಣಿಸಿಕೊಳ್ಳಲಿದ್ದಾರೆ. 2021ರಲ್ಲಿ ಒಳ್ಳೆಯ ಚಿತ್ರಗಳಲ್ಲಿ ಅವಕಾಶ ಮತ್ತು ಅತ್ಯುತ್ತಮ ಚಿತ್ರಗಳ ಬಿಡುಗಡೆಯ ನಿರೀಕ್ಷೆ ಹೊಂದಿದ್ದೇನೆ. ಚಿತ್ರಮಂದಿರಗಳು ಮತ್ತೆ ತೆರೆಯಲಿ. ಸಿನಿಮಾದ ನೈಜ ಅನುಭವ ಎಲ್ಲರಿಗೂ ಸಿಗುವಂತಾಗಲಿ ಎಂದು ನಿವೇತಾ ಆಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.