ಕೋಲ್ಕತ್ತ: ಸುತ್ತುಮುತ್ತಲೂ ಏನೇ ನಡೆಯಲಿ, ನಮ್ಮಂತಹ ಜನರು ಧನಾತ್ಮಕ ಮನೋಭಾವದಿಂದ ಇರುತ್ತೇವೆ. ವಿವಿಧ ಜಾತಿ, ಬಣ್ಣ, ಧರ್ಮಗಳ ಜನರು ಪರಸ್ಪರ ಅರಿತುಕೊಳ್ಳಲು ಸಿನಿಮಾ ಉತ್ತಮ ವೇದಿಕೆಯಾಗಿದೆ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ.
ಪಠಾಣ್ ಚಿತ್ರದ 'ಬೇಷರಮ್ ರಂಗ್' ಹಾಡಿನ ವಿವಾದ ಭುಗಿಲೆದ್ದ ಬೆನ್ನಲ್ಲೇ ಶಾರುಖ್ ಈ ಹೇಳಿಕೆ ನೀಡಿದ್ದಾರೆ.
ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಕೆಐಎಫ್‌ಎಫ್) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿನಿಮಾವು ಏಕತೆ, ಸಹೋದರತ್ವ ಮತ್ತು ಮಾನವೀಯ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಬಹುನಿರೀಕ್ಷಿತ ಪಠಾಣ್ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕಾಣಿಸಿಕೊಂಡಿರುವುದು ಒಂದು ವರ್ಗದ ಆಕ್ರೋಶಕ್ಕೆ ಗುರಿಯಾಗಿದ್ದು, ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ:
‘ಬೇಷರಮ್ ರಂಗ್’ವಿವಾದ: ಚಿತ್ರ ಮಂದಿರ ಸುಡಲು ಅಯೋಧ್ಯೆ ಸ್ವಾಮೀಜಿ ಕರೆ
ಪಠಾಣ್ ವಿವಾದ: ಅಂಧಭಕ್ತರನ್ನು ಎಲ್ಲಿವರೆಗೆ ಸಹಿಸಿಕೊಳ್ಳಬೇಕು? ನಟ ಪ್ರಕಾಶ್ ರಾಜ್
ಬೇಷರಮ್ ರಂಗ್ ಹಾಡು ಮತ್ತು ಕೇಸರಿ ಬಣ್ಣದ ಬಿಕಿನಿ:‘ಪಠಾಣ್’ಗೆ ಬಾಯ್ಕಾಟ್ ಬಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.