ಬೆಂಗಳೂರು: ‘ಓಲ್ಡ್ ಮಾಂಕ್’ ಚಿತ್ರದ ಟ್ರೇಲರ್ ಗುರುವಾರ (ಆ.26) ಬಿಡುಗಡೆ ಆಗಿದೆ. ಶ್ರೀನಿ ಅವರು ಈ ಚಿತ್ರದ ನಾಯಕ ಮತ್ತು ನಿರ್ದೇಶಕರಾಗಿದ್ದಾರೆ.
ಶೀರ್ಷಿಕೆಯಿಂದಲ್ಲೇ ಎಲ್ಲರ ಗಮನ ಸೆಳೆಯುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಸಿಹಿ ಕಹಿ ಚಂದ್ರು, ಎಸ್ ನಾರಾಯಣ್, ಆರ್.ಟಿ. ರಮಾ, ಡಿಂಗ್ರಿ ನಾಗರಾಜ್ ಸೇರಿದಂತೆ ದೊಡ್ಡ ತಾರಾಗಣವಿದೆ.
ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 3.92 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಭರತ್ ಪರಶುರಾಮ್ ಛಾಯಾಗ್ರಹಣ, ಸೌರಭ್-ವೈಭವ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ ಮಾಡಿದ್ದಾರೆ. ಪ್ರದೀಪ್ ಶರ್ಮಾ, ಸೃಜನ್ ಯರಬೋಲು, ಸೌರಭ್-ವೈಭವ್, ಶ್ರೀನಿ ಜತೆಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ‘ಟೋಪಿವಾಲಾ’, ‘ಬೀರ್ಬಲ್’, ‘ಶ್ರೀನಿವಾಸ ಕಲ್ಯಾಣ’, ‘ರೂಲ್ಸ್’ ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ನಿರ್ದೇಶಕ ಶ್ರೀನಿ, ಇದೀಗ ‘ಓಲ್ಡ್ ಮಾಂಕ್’ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.