ADVERTISEMENT

ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್: ನನ್ನ ಕೈಹಿಡಿಯುವವರು ಸಿಂಪಲ್ ಎಂದ ‘ಒಳ್ಳೆ ಹುಡುಗ‘

ನಟ ಪ್ರಥಮ್ (ಒಳ್ಳೆ ಹುಡುಗ ಪ್ರಥಮ್) ಅವರು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ನೋಡಿ ನಿಶ್ಚಯ ಮಾಡಿರುವ ಯುವತಿ ಜೊತೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2023, 5:52 IST
Last Updated 14 ಜೂನ್ 2023, 5:52 IST
ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್
ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್   

ಬೆಂಗಳೂರು: ನಟ ಪ್ರಥಮ್ (ಒಳ್ಳೆ ಹುಡುಗ ಪ್ರಥಮ್) ಅವರು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ನೋಡಿ ನಿಶ್ಚಯ ಮಾಡಿರುವ ಯುವತಿ ಜೊತೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ತಿಳಿಸಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದಿದ್ದಾರೆ.

‘ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್‌ಮೆಂಟ್ ಆಯ್ತು, ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ, ನಾನು ತುಂಬಾ ಸರಳವಾಗಿಯೇ ಬದುಕಿದವನು, ಹಾಗೇ ಇರೋಕೆ ಇಷ್ಟ; ನನ್ನ ಎಂಗೇಜ್‌ಮೆಂಟ್ಈ ದೇಶದ ದೊಡ್ಡ ಸುದ್ದಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ನೇಹಿತರು ಆತ್ಮೀಯರಿಗೆ ಈ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ‘ ಎಂದಿದ್ದಾರೆ.

ADVERTISEMENT

‘ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ, ಹೀಗೇ ಇದ್ದು ಬಿಡ್ತೀನಿ‌.. ಹರಸುವವರು ಅಲ್ಲಿಂದಲೇ ಹರಸಿ...ಅದೇ ಆಶೀರ್ವಾದ‌..‘ ಎಂದಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ, ‘ನನ್ನದು ಪೂರ್ಣ ಅರೇಂಜ್ ಮ್ಯಾರೇಜ್; ಯಾವುದೇ ಆಡಂಬರ,ವೈಭವ ಇರುವುದಿಲ್ಲ... ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ... ನನ್ನ ಕೈಹಿಡಿಯುವವರು ಮಾಧ್ಯಮ, ಸೋಶಿಯಲ್ ಮೀಡಿಯಾದಿಂದ ತುಂಬಾ ದೂರ... ಸಿದ್ಧರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ! ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ.. ನನಗೆ ದೇವಸ್ಥಾನದಲ್ಲಿ ಆಗುವ ಆಸೆ; ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ...

ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ‌..; ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್‌ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು ನೀವು ಹರಸಿ ಎಂದು ಕೋರಿದ್ದಾರೆ.

ಮಂಜುನಾಥ್ ಮೇಟಿ ಎನ್ನುವರು ಫೇಸ್‌ಬುಕ್‌ನಲ್ಲಿ ಪ್ರಥಮ್ ನಿಶ್ಚಿತಾರ್ಥದ ಫೋಟೊ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.