ADVERTISEMENT

ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಅಲಿಯಾ–ರಣಬೀರ್ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2023, 11:32 IST
Last Updated 25 ಡಿಸೆಂಬರ್ 2023, 11:32 IST
<div class="paragraphs"><p><strong>ಅಲಿಯಾ ಭಟ್‌–ರಣಬೀರ್‌ ಕಪೂರ್ ದಂಪತಿ ಮಗಳು ರಾಹಾ ಕಪೂರ್‌</strong></p></div>

ಅಲಿಯಾ ಭಟ್‌–ರಣಬೀರ್‌ ಕಪೂರ್ ದಂಪತಿ ಮಗಳು ರಾಹಾ ಕಪೂರ್‌

   

insta/ranbirfanbase

ಮುಂಬೈ: ಬಾಲಿವುಡ್‌ ಜನಪ್ರಿಯ ದಂಪತಿ ಅಲಿಯಾ ಭಟ್‌ – ರಣಬೀರ್‌ ಕಪೂರ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಮುಖವನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ. ಕ್ರಿಸ್‌ಮಸ್‌ ದಿನವೇ ರಾಹಾ ಕಪೂರ್ ಮುಖ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಅದೇ ವರ್ಷ ನವೆಂಬರ್‌ನಲ್ಲಿ ಪೋಷಕರಾಗಿ ಬಡ್ತಿ ಪಡೆದಿದ್ದರು. ನವೆಂಬರ್ 6ರಂದು ಜನಿಸಿದ್ದ ರಾಹಾ, ಇತ್ತೀಚೆಗಷ್ಟೆ ಒಂದು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಮಗು ಜನಿಸಿದಾಗಿನಿಂದ ಇಲ್ಲಿಯವರೆಗೂ ಮಗುವಿನ ಖಾಸಗಿ ಜೀವನವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ರಣಬೀರ್‌–ಅಲಿಯಾ ಮನವಿ ಮಾಡಿದ್ದರು.

ಇತ್ತೀಚೆಗೆ ರಾಹಾ ಹುಟ್ಟುಹಬ್ಬದ ಫೋಟೊಗಳನ್ನು ಹಂಚಿಕೊಂಡಿದ್ದ ಅಲಿಯಾ, ‘ನನ್ನ ಬದುಕು, ನನ್ನ ಬೆಳಕು’ ಎಂದು ಬರೆದುಕೊಂಡಿದ್ದರು.

ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ ರಾಹಾಳನ್ನು ನೆಟ್ಟಿಗರು ಮುತ್ತಜ್ಜ ರಾಜ್‌ ಕಪೂರ್‌ಗೆ ಹೋಲಿಕೆ ಮಾಡಿದ್ದಾರೆ. ಇನ್ನು ಕೆಲವರು ಅಜ್ಜ ರಣಧೀರ್ ಕಪೂರ್‌ ಹಾಗೆ ಕಾಣಿಸುತ್ತಾಳೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.