ನವದೆಹಲಿ: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಹಾಡೊಂದಕ್ಕೆ ಡ್ಯಾನ್ಸ್ ಮಾಡಿರುವ ವಿಡಿಯೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪಾಕಿಸ್ತಾನ ಕಲಾವಿದರಾದ ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿರುವ ‘ಪಸೂರಿ’ ಹಾಡಿಗೆ ರಾಕುಲ್ ಪ್ರೀತ್ ಸಿಂಗ್ ಸೊಂಟ ಬಳುಕಿಸಿದ್ದಾರೆ.
ಸದ್ಯ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಾಕುಲ್, ‘ಪ್ರಸ್ತುತ ನನ್ನ ನೆಚ್ಚಿನ ಹಾಡು ಇದಾಗಿದೆ. ಡ್ಯಾನ್ಸ್ ಕೋಚ್ ಡಿಂಪಲ್ ಕೋಟೆಚಾಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿರುವ ರಾಕುಲ್ ಪ್ರೀತ್ ಅವರ ಗೆಳೆಯ ಮತ್ತು ಚಲನಚಿತ್ರ ನಿರ್ಮಾಪಕ ಜಕ್ಕಿ ಬಗ್‌ನಾನಿ, ‘ನೀವು ನನಗೂ ಡ್ಯಾನ್ಸ್ ಕಲಿಸಬಹುದೇ’ ಎಂದು ಹೃದಯದ ಎಮೋಜಿಗಳನ್ನು ಹಾಕಿದ್ದಾರೆ.
ಜಕ್ಕಿ ಬಗ್‌ನಾನಿ ಅವರೊಂದಿಗೆ ನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಬ್ಬರ ಮದುವೆ ಕುರಿತಾದ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇವೆ.
ಕೋಲ್ಕತ್ತ ಮೂಲದ 36 ವರ್ಷದ ಜಕ್ಕಿ ಬಗ್‌ನಾನಿ ಬಾಲಿವುಡ್ ನಟ ಹಾಗೂ ನಿರ್ಮಾಪಕ. 2001 ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.
‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ‘ರನ್‌ವೇ –34’ ಚಿತ್ರದಲ್ಲಿ ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಅವರೊಂದಿಗೆ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.