ಮುಂಬೈ: ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಮಕ್ಕಳೊಂದಿಗೆ ಓಣಂ ಹಬ್ಬವನ್ನು ಆಚರಿಸಿದ್ದಾರೆ.
ಸಾಂಪ್ರದಾಯಿಕ ಉಡುಗೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಘ್ನೇಶ್ ಶಿವನ್, ಮುಂಚಿತವಾಗಿಯೇ ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಪತ್ನಿ ನಯನತಾರ ಹಾಗೂ ಅವಳಿ ಮಕ್ಕಳ ಫೋಟೊ ಹಂಚಿಕೊಂಡಿರುವ ಅವರು, ಸರಳ ಮತ್ತು ಸುಂದರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.
ಮಕ್ಕಳೊಂದಿಗೆ ಇದು ಮೊದಲ ಓಣಂ ಆಚರಣೆ ಅಂತಲೂ ವಿಘ್ನೇಶ್ ಶಿವನ್ ಬರೆದುಕೊಂಡಿದ್ದಾರೆ.
ಈ ವರ್ಷ ಓಣಂ ಹಬ್ಬವನ್ನು ಆಗಸ್ಟ್ 31 ರಂದು ಆಚರಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.