ADVERTISEMENT

‘ಆಪರೇಷನ್ ಡಿ’ಗೆ ಧ್ರುವ ಸರ್ಜಾ ಸಾಥ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 20:00 IST
Last Updated 17 ಅಕ್ಟೋಬರ್ 2024, 20:00 IST
ಸ್ನೇಹ ಭಟ್
ಸ್ನೇಹ ಭಟ್   

ಬಹುತೇಕ ಹೊಸಬರಿಂದಲೇ ಕೂಡಿರುವ ‘ಆಪರೇಶನ್ ಡಿ’ ಚಿತ್ರದ ಟೀಸರ್‌ ಅನ್ನು ಇತ್ತೀಚೆಗಷ್ಟೇ ನಟ ಧ್ರುವ ಸರ್ಜಾ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ. ನಿರ್ಮಿಸಿರುವ ಚಿತ್ರಕ್ಕೆ ತಿರುಮಲೇಶ್ ವಿ. ನಿರ್ದೇಶನವಿದೆ.

‘ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಮರ್ಡರ್ ಮಿಸ್ಟರಿ ಆದರೂ, ಚಿತ್ರದಲ್ಲಿ ರಕ್ತ ಕಾಣುವುದಿಲ್ಲ ಹಾಗೂ ಆ್ಯಕ್ಷನ್ ಸನ್ನಿವೇಶಗಳಿಲ್ಲ. 2018 - 19ರಲ್ಲಿ ಹುಟ್ಟಿದ ಈ ಕಾಲ್ಪನಿಕ ಕಥೆ, 2022ರಲ್ಲಿ ಸಿನಿಮಾ ರೂಪ ಪಡೆದುಕೊಂಡಿತ್ತು. ನನ್ನ ಕಥೆಯನ್ನು ಸಿನಿಮಾವಾಗಿಸಲು ಕುಟುಂಬದವರು ಹಾಗೂ ಮಿತ್ರರು ಸಹಾಯ ಮಾಡಿದರು. ಸದ್ಯದಲ್ಲೇ ಚಿತ್ರ ಸೆನ್ಸಾರ್‌ಗೆ ಹೋಗಲಿದ್ದು, ವರ್ಷದ ಕೊನೆಗೆ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು. 

ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ವೇದಿಕಾ ಸಂಗೀತ ನಿರ್ದೇಶನವಿದೆ. ಕಾರ್ತಿಕ್ ಪ್ರಸಾದ್‌ ಛಾಯಾಚಿತ್ರಗ್ರಹಣ, ವಿಕ್ರಮ್ ಶ್ರೀಧರ್‌ ಸಂಕಲನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.