ADVERTISEMENT

ಕಾರ್ಮಿಕರ ಕಷ್ಟಕ್ಕೆ ಮಿಡಿದ ‘ಪಡ್ಡೆಹುಲಿ’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 8:29 IST
Last Updated 13 ಏಪ್ರಿಲ್ 2020, 8:29 IST
ಶ್ರೇಯಸ್‌ ಮಂಜು
ಶ್ರೇಯಸ್‌ ಮಂಜು   

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಮಂಜುಗೆ ಮೊದಲ ಚಿತ್ರ‘ಪಡ್ಡೆಹುಲಿ’ ನಿರೀಕ್ಷಿಸಿದ ಯಶಸ್ಸು ಕೊಡಲಿಲ್ಲ ನಿಜ. ಹಾಗಂಥ ಅವರು ಕೈಕಟ್ಟಿ ಕೂರದೆ, ನವಿರಾದ ಪ್ರೇಮ ಕಥೆಯ ‘ವಿಷ್ಣು ಪ್ರಿಯ’ ಮೂಲಕ ಮತ್ತೆ ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಕಣ್ಸನ್ನೆ ಬೆಡಗಿ’ ಮಲಯಾಳದ ನಟಿ ಪ್ರಿಯಾ ಪ್ರಕಾಶ್‌ವಾರಿಯರ್‌ ಜತೆಗೆ ಅದೃಷ್ಟ ಪರೀಕ್ಷೆಗೆ ಅವರು ಇಳಿದಿದ್ದಾರೆ.

ಈ ಚಿತ್ರವನ್ನು ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ನಿರ್ಮಿಸಲುಆರಂಭದಲ್ಲಿ ಚಿಂತಿಸಿದ್ದ ಕೆ.ಮಂಜು, ಈಗ ಕನ್ನಡ ಮತ್ತು ಮಲಯಾಳಕ್ಕೆ ಸೀಮಿತಗೊಳಿಸಿದ್ದಾರೆ.

ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೆಂಗಳೂರು, ಚಿಕ್ಕಮಗಳೂರು ಹಾಗೂ ಕೇರಳದಲ್ಲಿ 50 ದಿನಗಳ ಚಿತ್ರೀಕರಣವಾಗಿದೆ. ಮೈಸೂರಿನಲ್ಲಿ ನಡೆಯಬೇಕಿದ್ದ ಚಿತ್ರೀಕರಣವನ್ನು ಕೊರೊನಾ ಕಾರಣಕ್ಕೆ ಮುಂದೂಡಲಾಗಿದೆ.ಸದ್ಯ ಚಿತ್ರದಎಡಿಟಿಂಗ್‌ ಆಗಿದೆ. ಗ್ರಾಫಿಕ್‌, ರೆಕಾರ್ಡಿಂಗ್‌,ಡಬ್ಬಿಂಗ್‌ ಕೆಲಸ ಬಾಕಿ ಇವೆ. ಲಾಕ್‌ಡೌನ್‌ಮುಗಿದ ಮೇಲೆ ಚಿತ್ರದ ಬಾಕಿ ಕೆಲಸ ಶುರುವಾಗಲಿವೆ.

ADVERTISEMENT

ಧಾರಾವಾಡದ ಸಿಂಧೂಶ್ರೀ ಅವರ ಬದುಕಿನ ಕಥೆ ಆಧರಿಸಿದ ಚಿತ್ರವಿದು. ಕೆ.ಮಂಜುಮತ್ತು ವಿ.ಕೆ. ಪ್ರಕಾಶ್‌ ಚಿತ್ರಕಥೆ ಹೆಣೆದಿದ್ದಾರೆ. ವಿ.ಕೆ. ಪ್ರಕಾಶ್‌ ನಿರ್ದೇಶನದ ಹೊಣೆ ಹೊತ್ತಿದ್ದಾರೆ.ಸಂಭಾಷಣೆರವಿ ಶ್ರೀವತ್ಸ, ಛಾಯಾಗ್ರಹಣ ವಿನೋದ್‌ ಭಾರ್ತಿ, ಸಂಗೀತ ಗೋಪಿ ಸುಂದರ್ ಅವರದ್ದು. ಚಿತ್ರದ ನಾಲ್ಕು ಹಾಡುಗಳಿಗೆ ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಸುಚೇಂದ್ರಪ್ರಸಾದ್‌, ಅಚ್ಯುತ್‌ಕುಮಾರ್‌, ಅಶ್ವಿನಿ ಗೌಡ ತಾರಾಗಣದಲ್ಲಿದ್ದಾರೆ.

ಶ್ರೇಯಸ್‌ ಹುಟ್ಟುಹಬ್ಬದ ದಿನವೇ ಚಿತ್ರದ ಮೊದಲ ಲುಕ್‌ ಬಿಡುಗಡೆಯಾಗಿದೆ. ಕರೊನಾ ಕಾರಣಕ್ಕೆ ಈ ಬಾರಿ ಹುಟ್ಟಹಬ್ಬಆಚರಣೆ ಕೈಬಿಟ್ಟ ಶ್ರೇಯಸ್‌,ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಸಿಕ್ಕಿಕೊಂಡಿರುವ ಉತ್ತರ ಕರ್ನಾಟಕದ ಕೂಲಿಕಾರ್ಮಿಕರಿಗೆ ಊಟ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಈಮೂಲಕ ಜನ್ಮದಿನ ಸಾರ್ಥಕಪಡಿಸಿಕೊಂಡ ಮಗನ ಬಗ್ಗೆ ಮಂಜು ಅವರಿಗೆ ಅಪಾರ ಹೆಮ್ಮೆ.

ಪುಟ್ಟೇನಹಳ್ಳಿ ಮತ್ತಿರಕಡೆಗಳಲ್ಲಿ ಬೀಡು ಬಿಟ್ಟಿರುವ ಕೂಲಿಕಾರ್ಮಿಕರ ಸ್ಥಿತಿ ನೋಡಿ ಶ್ರೇಯಸ್‌ ತುಂಬಾ ಫೀಲ್‌ ಮಾಡಿಕೊಂಡ. ಕಾರ್ಮಿಕರಿಗೆಲ್ಲ ಅಡುಗೆ ಮಾಡಿಸಿ ಊಟ ಹಾಕಿಸಿದ. ನಾವು ಸಹ ಕಷ್ಟಗಳ ನಡುವೆ ಬೆಳೆದುಬಂದವರೇ. ಆದರೆ, ಕಡುಬಡತನ ಎನ್ನುವುದು ಇಷ್ಟೊಂದು ಕ್ರೂರವಾಗಿರುತ್ತದೆ ಎನ್ನುವುದನ್ನು ಕಣ್ಣಾರೆ ಕಂಡು ದುಃಖಿತನಾದೆ ಎನ್ನುವ ಮಾತು ಸೇರಿಸಿದರು ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.