ಕೋಲಾರ, ದೇವನಹಳ್ಳಿ ಸುತ್ತಮುತ್ತ ಶೋಷಿತ ವರ್ಗದಲ್ಲಿ ನಡೆದ ಕಥೆಯನ್ನಿಟ್ಟುಕೊಂಡು ಜೀವಾ ನವೀನ್ ಅವರು ನಿರ್ದೇಶಿಸಿರುವ ‘ಪಾಲಾರ್’ ಫೆ.24ರಂದು ತೆರೆಕಾಣಲಿದೆ.
ಈ ಚಿತ್ರವನ್ನು ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಮೂಲಕ ಮಂಜುನಾಥ್ ಅವರು ಬಿಡುಗಡೆ ಮಾಡುತ್ತಿದ್ದಾರೆ. ‘ಸುಮಾರು ವರ್ಷಗಳ ಹಿಂದೆ ಕೋಲಾರ ಮತ್ತು ದೇವನಹಳ್ಳಿ ಭಾಗದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರಕಥೆ ಹೆಣೆದಿದ್ದೇವೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ, ಹೋರಾಟದ ಕಥನ. ಕಥೆ, ಸಿನಿಮಾ ಮೇಲೆ ನಂಬಿಕೆಯಿದೆ. ಪಾಲಾರ್ ನದಿಗೂ ನಮ್ಮ ಕಥೆಗೂ ಸಂಬಂಧವಿಲ್ಲ.
ಒಂದು ರೂಪಕವಾಗಿ ಅದನ್ನು ಬಳಸಿದ್ದೇವೆ. ಅಲ್ಲದೆ ಪಾಲಾರ್ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕಥೆ’ ಎನ್ನುತ್ತಾರೆ ಜೀವಾ ನವೀನ್. ತೆಲುಗಿನ ‘ಸಿನಿಮಾ ಬಂಡಿ’ ನಟಿ, ಗಾಯಕಿ ವೈ.ಜಿ.ಉಮಾ ಅವರು ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.