‘ಕೆಜಿಎಫ್ ಚಾಪ್ಟರ್ 2’ರಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್, ಹಿಂದಿಯ ‘ಪಾಣಿಪತ್’ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರದ ಖಳನಾಯಕಅಹಮದ್ ಶಹಾ ಅಬ್ದಾಲಿ (ಅಹ್ಮದ್ ಶಾಹ ದುರ್ರಾನಿ) ಪಾತ್ರದಲ್ಲಿನ ದತ್ ಲುಕ್‌ಗೆ ಚಿತ್ರರಸಿಕರು ಪಿಧಾ ಆಗಿದ್ದಾರೆ.
ಆಶುತೋಷ್ ಗೊವಾರಿಕರ್ ನಿರ್ದೇಶನದ ಬಹುತಾರಾಗಣದ ಈ ಚಿತ್ರವು ಐತಿಹಾಸಿಕ ಕಥೆ ಆಧರಿಸಿದೆ.ಈ ಚಿತ್ರವು ಮೂರನೇ ಪಾಣಿಪತ್ ಕದನದಸನ್ನಿವೇಶಗಳ ಕಥಾಹಂದರ ಹೊಂದಿದೆ. ಚಿತ್ರ ಬಹುತೇಕ ಪೂರ್ಣಗೊಂಡಿದ್ದು,ಇದೇ ಡಿಸೆಂಬರ್ 6ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
2016ರಲ್ಲಿ ‘ಮೊಹೆಂಜೊ ದಾರೊ’ ಚಿತ್ರವನ್ನು ನಿರ್ದೇಶಿಸಿದ್ದಆಶುತೋಷ್, ಮತ್ತೊಮ್ಮೆಐತಿಹಾಸಿಕ ಚಿತ್ರ ನಿರ್ದೇಶನ ಮಾಡಿದ್ದಾರೆ.ಮರಾಠರ ಶೌರ್ಯವನ್ನು ಅವರುತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯಾಗಿಪಾರ್ವತಿ ಬಾಯಿ ಪಾತ್ರದಲ್ಲಿನಟಿಸಿರುವಬಾಲಿವುಡ್ ಅಭಿನೇತ್ರಿ ಕೃತಿ ಸೇನನ್ ಅವರ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಗಮನ ಸೆಳೆಯುವಂತಿದೆ.ಪಾರ್ವತಿ ಬಾಯಿ,ಮರಾಠ ನಾಯಕ ಸದಾಶಿವ ರಾವ್ ಭಾವು ಅವರ ಎರಡನೇ ಪತ್ನಿಯಾಗಿದ್ದವರು.
ಈ ಚಿತ್ರದ ನಾಯಕ ಅರ್ಜುನ್ ಕಪೂರ್, ಸದಾಶಿವ ರಾವ್ ಭಾವು ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಸಾಕಷ್ಟು ವರ್ಕೌಟ್ ಮಾಡಿದ್ದು ಅವರು ಮರಾಠಿಯನ್ನೂಕಲಿತು ಅಭಿನಯಿಸಿದ್ದಾರಂತೆ. ಅರ್ಜುನ್‌ಗೆ ನಿರ್ದೇಶಕಆಶುತೋಷ್ ಅವರೇ ಮರಾಠಿಯನ್ನು ಕಲಿಸಿಕೊಟ್ಟಿದ್ದಾರಂತೆ. ಅರ್ಜುನ್ ಪಾತ್ರದ ಮೊದಲ ಲಕ್‌ನ ಪೊಸ್ಟರ್ ಅನ್ನು ಚಿತ್ರತಂಡ ಇನ್ನೂ ಬಿಡುಗಡೆ ಮಾಡದೆ, ಕುತೂಹಲವನ್ನು ಕಾಯ್ದುಕೊಂಡಿದೆ. ವರ್ಷದ ಹಿಂದೆ ಚಿತ್ರ ತಂಡ, ಕೈಯಲ್ಲಿ ಖಡ್ಗ ಹಿಡಿದ ಮೊದಲ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರರಸಿಕರಲ್ಲಿಕುತೂಹಲ ಮೂಡಿಸಿತ್ತು.
1761ರ ಜನವರಿ 14ರಂದು ಇಂದಿನ ಹರಿಯಾಣದಲ್ಲಿರುವ ಪಾಣಿಪತ್‌ನಲ್ಲಿ ಮರಾಠ ಸಾಮ್ರಾಜ್ಯದ ನಾಯಕರಿಗೂ ಮತ್ತುಅಹ್ಮದ್ ಶಾಹ ದುರ್ರಾನಿ ನೇತೃತ್ವದಪಾಶ್ತುನ್ ಜನರ ಸೇನೆಯ ಮಧ್ಯೆ ಮೂರನೆಯ ಪಾಣಿಪತ್ ಯುದ್ಧ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.