ದಕ್ಷಿಣ ಕೊರಿಯಾ ಸಿನಿಮಾ ‘ಪ್ಯಾರಸೈಟ್’ ಅತ್ಯುತ್ತಮ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. 2020ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಭಾನುವಾರ ರಾತ್ರಿ ಲಾಸ್ ಏಂಜಲಿಸ್‌ನಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಘೋಷಣೆಯಾಗಿದೆ.
‘ಪ್ಯಾರಸೈಟ್’ ಸಿನಿಮಾದ ನಿರ್ದೇಶಕ ಬಾಂಗ್ ಜೂನ್ ಹೂ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
‘ಜೋಕರ್’ ಸಿನಿಮಾದ ಅದ್ಭುತ ನಟನೆಗೆ ಜೋಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ ಹಾಗೂ ‘ಜ್ಯೂಡಿ’ ಸಿನಿಮಾ ನಟನೆಗೆ ರಿನೇ ಜೆಲ್‌ವೆಗರ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
‘ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್’ ಸಿನಿಮಾದ ನಟನೆಗಾಗಿ ನಟ ಬ್ರ್ಯಾಡ್ ಪಿಟ್ ಅತ್ಯುತ್ತಮ ಫೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಬ್ರ್ಯಾಡ್ ಪಿಟ್ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಲಭಿಸಿದೆ.
ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ನಟ ಜಾಕ್ವಿನ್ ಫೀನಿಕ್ಸ್ ಅಭಿನಯದ ಸಿನಿಮಾ ಜೋಕರ್ 11 ವಿಭಾಗದಲ್ಲಿ ನಾಮಿನೇಷನ್ ಆಗಿತ್ತು. ಈ ಸಿನಿಮಾವೇ ಹೆಚ್ಚು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಭಾರತದಿಂದ ನಟ ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ಅಭಿನಯದ ‘ಗಲ್ಲಿ ಬಾಯ್’ ಅಧಿಕೃತ ಎಂಟ್ರಿ ಪಡೆದುಕೊಂಡಿತ್ತು. ಆದರೆ, ಅಂತಿಮ ಹಂತದಲ್ಲಿ ಸಿನಿಮಾ ಹೊರಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.