ADVERTISEMENT

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಒಲವು: ಬುಕ್ ಮೈ ಶೋ

ಪಿಟಿಐ
Published 20 ಡಿಸೆಂಬರ್ 2023, 12:58 IST
Last Updated 20 ಡಿಸೆಂಬರ್ 2023, 12:58 IST
<div class="paragraphs"><p>ಸಾಮಾಜಿಕ ಜಾಲತಾಣ ಎಕ್ಸ್‌</p></div>
   

ಸಾಮಾಜಿಕ ಜಾಲತಾಣ ಎಕ್ಸ್‌

ಮುಂಬೈ: ಈ ವರ್ಷ ಬಿಡುಗಡೆಯಾದ ಸಿನಿಮಾಗಳನ್ನು ಅತಿ ಹೆಚ್ಚು ಜನರು ಚಿತ್ರಮಂದಿರಗಳಲ್ಲೇ ವೀಕ್ಷಿಸಿದ್ದಾರೆ ಎಂದು ಟಿಕೆಟ್‌ ಬುಕಿಂಗ್‌ ಪ್ಲಾಟ್‌ಫಾರ್ಮ್‌ ಬುಕ್‌ ಮೈ ಶೋ ಹೇಳಿದೆ.

ಅ‌ದರಲ್ಲೂ ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದಲ್ಲಿ 1 ಕೋಟಿ 9 ಲಕ್ಷಕ್ಕೂ ಹೆಚ್ಚು ಜನರು ಚಿತ್ರಮಂದಿರಗಳಿಗೆ ಭೇಟಿಯಿತ್ತಿದ್ದಾರೆ ಎಂದು ಬುಕ್‌ ಮೈ ಶೋ ತಿಳಿಸಿದೆ.

ADVERTISEMENT

ಆಗಸ್ಟ್ 13ರಂದು ಒಂದೇ ದಿನ 28 ಲಕ್ಷ ಟಿಕೆಟ್‌ ಬುಕಿಂಗ್‌ ಆಗುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಬುಕ್‌ ಮೈ ಶೋ ಪ್ರಕಾರ, 2023ರ ಅತ್ಯಂತ ಜನಪ್ರಿಯ ಸಿನಿಮಾಗಳೆಂದರೆ ಶಾರುಖ್ ಖಾನ್ ಅಭಿನಯದ ‘ಜವಾನ್’ ಮತ್ತು ‘ಪಠಾಣ್‌’. ಸನ್ನಿ ಡಿಯೋಲ್ ನಟನೆಯ ‘ಗದರ್ 2’, ರಜನಿಕಾಂತ್ ಅಭಿನಯದ ಜೈಲರ್, ವಿಜಯ್ ಅಭಿನಯದ ‘ಲಿಯೋ’, ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್: ಭಾಗ 2’, ಸಲ್ಮಾನ್ ಖಾನ್ ಅವರ ‘ಟೈಗರ್ 3’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’, ‘OMG 2’ ಹಾಗೂ ರಣಬೀರ್ ಕಪೂರ್ ನಟನೆಯ ‘ಅನಿಮಲ್‌’.

1.35 ಕೋಟಿ ಜನರು ಲೈವ್ ಶೋಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರವಾಸಗಳ ಸಮಯದಲ್ಲಿ ಸುಮಾರು 4 ಲಕ್ಷ ಮಂದಿ ತಮ್ಮ ರಾಜ್ಯಗಳ ಹೊರತಾಗಿ ಇತರೆಡೆ ಪ್ರಯಾಣಿಸಿದ್ದಾರೆ ಎಂದು ಬುಕ್‌ ಮೈ ಶೋ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.