ಬಾಲಿವುಡ್‌ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್ 80ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಅಮಿತಾಭ್ ಬಚ್ಚನ್ ಜೀ 80ನೇ ಹುಟ್ಟುಹಬ್ಬದ ಶುಭಾಶಯಗಳು. ಹಲವಾರು ತಲೆಮಾರಿನ ಪ್ರೇಕ್ಷಕರನ್ನು ಮನರಂಜಿಸಿದ ಭಾರತದ ಅತ್ಯಂತ ವರ್ಚಸ್ಸಿನನಟ ಅವರು. ಆರೋಗ್ಯವಂತ ಧೀರ್ಘಾವಧಿ ಬದುಕು ನಡೆಸಲಿ ಎಂದಿದ್ದಾರೆ.
ಚಿತ್ರರಂಗ ಸೇರಿದಂತೆ ಸಮಾಜದ ಹಲವಾರು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ‘ಬಿಗ್‌ಬಿ’ಗೆ ಶುಭ ಹಾರೈಸಿದ್ದಾರೆ. ಅವರ ಜೊತೆಗಿನ ಚಿತ್ರವನ್ನು, ಅನುಭವಗಳನ್ನು ಹಂಚಿಕೊಂಡಿದ್ದಾರೆ. 5 ರಾಷ್ಟ್ರ ಪ್ರಶಸ್ತಿ, 15 ಫಿಲಂಫೇರ್, ಹಲವಾರು ಪ್ರಶಸ್ತಿಗಳು ಅಮಿತಾಭ್ ನಟನೆಗೆ ಸಂದಿವೆ. 1984ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಮತ್ತು 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ. 2018ರಲ್ಲಿ ದಾದಾ ಸಾಹೇಬ್ ಫಾಲ್ಕೆ ಗೌರವ ಲಭಿಸಿದೆ.
80ನೇ ಹುಟ್ಟುಹಬ್ಬದ ಅಂಗವಾಗಿ ಅಮಿತಾಭ್ ಕುಟುಂಬದ ಜೊತೆ ತಿರುಪತಿ ದರ್ಶನಕ್ಕೆ ತೆರಳುವ ಸಾಧ್ಯತೆಯಿದೆ. ಅ.8ರಿಂದ ಪ್ರಾರಂಭಗೊಂಡ ಅಮಿತಾಭ್ ಚಿತ್ರೋತ್ಸವಕ್ಕೆ ಇಂದು ತೆರೆ ಬೀಳಲಿದೆ.
ಅವರ ‘ಗುಡ್‌ಬೈ’ ಚಿತ್ರ ಬಿಡುಗಡೆಗೊಂಡಿದ್ದು, ಹುಟ್ಟುಹಬ್ಬದ ಪ್ರಯುಕ್ತ ಇಂದು ಟಿಕೆಟ್ ದರ ₹80. ಇತ್ತೀಚೆಗಷ್ಟೆ ತೆರೆ ಕಂಡ ಬ್ರಹ್ಮಾಸ್ತ್ರ ಚಿತ್ರದಲ್ಲಿಯೂ ಬಚ್ಚನ್ ಕಾಣಿಸಿಕೊಂಡಿದ್ದರು. ಇದಲ್ಲದೆ, 3 ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.