ADVERTISEMENT

ಭಾರತ–ಪಾಕಿಸ್ತಾನ ಜನರು ಪರಸ್ಪರ ಸಮಾನ ಪ್ರೀತಿ ಹೊಂದಿದ್ದಾರೆ: ಸನ್ನಿ ಡಿಯೋಲ್‌

ಪಿಟಿಐ
Published 27 ಜುಲೈ 2023, 14:14 IST
Last Updated 27 ಜುಲೈ 2023, 14:14 IST
ಸನ್ನಿ ಡಿಯೋಲ್‌
ಸನ್ನಿ ಡಿಯೋಲ್‌   

ಮುಂಬೈ: ಭಾರತ ಮತ್ತು ಪಾಕಿಸ್ತಾನದ ಜನರು ಪರಸ್ಪರ ‘ಸಮಾನ ಪ್ರೀತಿಯನ್ನು’ ಹೊಂದಿದ್ದಾರೆ. ಆದರೆ ಎರಡು ದೇಶಗಳ ನಡುವಿನ ದ್ವೇಷಕ್ಕೆ ‘ರಾಜಕೀಯ ಆಟ’ ಕಾರಣವಾಗಿದೆ ಎಂದು ನಟ, ರಾಜಕಾರಣಿ ಸನ್ನಿ ಡಿಯೋಲ್‌ ಹೇಳಿದ್ದಾರೆ.

ಬುಧವಾರ ರಾತ್ರಿ ಅವರ ಮುಂಬರುವ ಚಿತ್ರ ಗದರ್‌–2 ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸನ್ನಿ ಡಿಯೋಲ್‌, ಎರಡು ರಾಷ್ಟ್ರಗಳ ಜನರು ಪರಸ್ಪರ ಜಗಳವಾಡಲು ಬಯಸುವುದಿಲ್ಲ ಎಂದರು. ‘ಏನು ಕೊಡಬೇಕು, ಏನನ್ನು ತೆಗೆದುಕೊಳ್ಳಬೇಕು ಎಂಬುದಲ್ಲ, ಅದು ಮಾನವೀಯತೆಗೆ ಸಂಬಂಧಿಸಿದ ವಿಷಯವಾಗಿದೆ. ಯಾವುದೇ ಜಗಳಗಳು ಇರಬಾರದು. ಎರಡೂ ಕಡೆ ಸಮಾನ ಪ್ರೀತಿ ಇದೆ. ಆದರೆ ರಾಜಕೀಯ ಆಟದಿಂದ ದ್ವೇಷವನ್ನು ಹುಟ್ಟುಹಾಕುತ್ತಿದೆ. ಈ ಚಿತ್ರದಲ್ಲೂ ನೀವು ಈ ವಿಷಯಗಳನ್ನು ನೋಡುತ್ತೀರಿ ಎಂದು ತಿಳಿಸಿದರು

ಎರಡು ದೇಶದ ಜನರು ಪರಸ್ಪರ ಜಗಳವಾಡುವುದನ್ನು ಬಯಸುವುದಿಲ್ಲ ನಾವು ಒಂದೇ ನೆಲದವರು ಎಂದು ಗುರುದಾಸ್‌ಪುರದ ಬಿಜೆಪಿ ಸಂಸದ ಡಿಯೋಲ್‌ ವರದಿಗಾರರಿಗೆ ತಿಳಿಸಿದರು.

ADVERTISEMENT

ಗದರ್‌ 2 ಚಿತ್ರದಲ್ಲಿ ಡಿಯೋಲ್‌ ತಮ್ಮ 2001ರ ಬ್ಲಾಕ್‌ ಬ್ಲಾಸ್ಟರ್‌ ಹಿಟ್‌ ಗದರ್‌: ಏಕ್‌ ಪ್ರೇಮ್‌ ಕಥಾ ಚಿತ್ರದ ತಾರಾ ಸಿಂಗ್‌ ಪಾತ್ರವನ್ನು ಪುನರಾವರ್ತಿಸಿದ್ದಾರೆ.

22 ವರ್ಷಗಳ ಹಿಂದೆ ಗದರ್‌ ಬಿಡುಗಡೆಯಾದಾಗ ಆ ಚಿತ್ರದ ಮೇಲೆ ಪ್ರೀತಿಯ ಸುರಿಮಳೆಗೈದ ಪ್ರೇಕ್ಷಕರಿಗೆ ನಾನು ಕೃತಜ್ಞನಾಗಿದ್ದೇನೆ. ಆ ಸಿನಿಮಾ ಅಷ್ಟೊಂದು ಜನಪ್ರಿಯಗೊಳ್ಳುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ನಾವು ಆ ಸಿನಿಮಾವನ್ನು ಸಂಪೂರ್ಣ ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಮಾಡಿದ್ದೇವೆ. ಜನರ ಉತ್ತಮ ಸ್ಪಂದನೆ ದೊರಕಿದೆ. ‘ಗದರ್‌–2’ ಚಿತ್ರದ ವಿಷಯದಲ್ಲೂ ಮತ್ತೆ ಅದೇ ಸಂಭವಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಡಿಯೋಲ್‌ ಹೇಳಿದರು.

ಗದರ್ 2 ಚಿತ್ರದಲ್ಲಿ ಅಮೀಶಾ ಪಟೇಲ್‌ ಮತ್ತು ಉತ್ಕರ್ಷ್‌ ಶರ್ಮಾ ಸಹ ನಟಿಸಿದ್ದು, ಆಗಸ್ಟ್‌ 11ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.