ಚೆನ್ನೈ: ಪೊಂಗಲ್ ಹಬ್ಬದ ಅಂಗವಾಗಿ ಬಹುಭಾಷಾ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
ಕಳೆದ ವರ್ಷ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದಿರುವ ಜ್ಯೋತಿಕಾ, ಸಿನಿಮಾ, ಪ್ರವಾಸ, ಹಬ್ಬ ಹಾಗೂ ಸಂಭ್ರಮಾಚರಣೆಯ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಪೊಂಗಲ್ ಹಬ್ಬದ ಪ್ರಯುಕ್ತ ಪತಿ ಜೊತೆಗಿನ ಫೋಟೊವೊಂದನ್ನು ಹಂಚಿಕೊಂಡಿರುವ ಅವರು, ‘ಎಲ್ಲರಿಗೂ ಸಂಕ್ರಾಂತಿ, ಪೊಂಗಲ್ ಹಬ್ಬದ ಶುಭಾಶಯ’ ಎಂದು ಪೋಸ್ಟ್ ಮಾಡಿದ್ದಾರೆ.
ಜ್ಯೋತಿಕಾ ಅವರು ಬಿಳಿ ಸೀರೆಯಲ್ಲಿ ಕಾಣಿಸಿಕೊಂಡರೆ, ಸೂರ್ಯ ನೀಲಿ ಕುರ್ತಾವನ್ನು ಧರಿಸಿರುವುದನ್ನು ಕಾಣಬಹುದು.
ಜ್ಯೋತಿಕಾ 2006 ರಲ್ಲಿ ಸೂರ್ಯ ಅವರನ್ನು ವಿವಾಹವಾಗಿದ್ದರು. ಇವರಿಗೆ ದಿಯಾ ಮತ್ತು ದೇವ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.