ADVERTISEMENT

ನಾನಿನ್ನೂ ಜೀವಂತವಾಗಿದ್ದೇನೆ: ಪೂನಂ ಪಾಂಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2024, 7:25 IST
Last Updated 3 ಫೆಬ್ರುವರಿ 2024, 7:25 IST
<div class="paragraphs"><p>ಪೂನಂ ಪಾಂಡೆ</p></div>

ಪೂನಂ ಪಾಂಡೆ

   

(ಚಿತ್ರ ಕೃಪೆ: Instagram- poonampandeyreal)

ಮುಂಬೈ: 'ನಾನಿನ್ನೂ ಜೀವಂತವಾಗಿದ್ದೇನೆ' ಎಂದು ನಟಿ-ರೂಪದರ್ಶಿ ಪೂನಂ ಪಾಂಡೆ ಇಂದು (ಶನಿವಾರ) ವಿಡಿಯೊ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಪೂನಂ ನಿಧನರಾಗಿದ್ದಾರೆ ಎಂಬ ಸುದ್ದಿ ಶುಕ್ರವಾರ ಹರಡಿತ್ತು. ಪೂನಂ ಇನ್‌ಸ್ಟಾಗ್ರಾಂ ಪುಟದಲ್ಲೇ ಅವರ ಕುಟುಂಬದವರು ಹಾಗೂ ಸ್ನೇಹಿತರು ನಟಿಯ ಸಾವಿನ ಕುರಿತು ಪೋಸ್ಟ್‌ ಹಾಕಿದ್ದರು.

ಈ ಕುರಿತು ವಿಡಿಯೊ ಸಂದೇಶ ಹಂಚಿರುವ ಪೂನಂ, 'ನಿಮ್ಮಲ್ಲರೊಂದಿಗೆ ಮಹತ್ವದ ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ನಾನಿನ್ನೂ ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ. ಆದರೆ ದುರಂತದ ಸಂಗತಿಯೆಂದರೆ ಈ ರೋಗವನ್ನು ಹೇಗೆ ಎದುರಿಸಬೇಕೆಂದು ತಿಳಿಯದೇ ಸಾವಿರಾರು ಮಹಿಳೆಯರನ್ನು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ' ಎಂದು ಹೇಳಿದ್ದಾರೆ.

'ಇತರೆ ಕೆಲವು ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. HPV ಲಸಿಕೆ ಮತ್ತು ಆರಂಭದಲ್ಲಿ ರೋಗ ಪತ್ತೆ ಪರೀಕ್ಷೆ ಪ್ರಮುಖವೆನಿಸಿದೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳದಂತೆ ನಾವು ನೋಡಿಕೊಳ್ಳಬೇಕು. ಈ ಕುರಿತು ಪ್ರತಿಯೊಬ್ಬ ಮಹಿಳೆಗೂ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಹಂಚೋಣ. ಇನ್ನಷ್ಟು ಮಾಹಿತಿಗಾಗಿ ನನ್ನ ಬಯೋದಲ್ಲಿನ ಲಿಂಕ್‌ಗೆ ಭೇಟಿ ಕೊಡಿ. ನಾವೆಲ್ಲ ಒಟ್ಟಾಗಿ ವಿನಾಶಕಾರಿ ರೋಗ ನಿರ್ಮೂಲನೆ ಮಾಡಲು ಪ್ರಯತ್ನಿಸೋಣ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.