ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಆರ್. ಮಯಿಲ್ ಸಾಮಿ(57) ಅವರು ಭಾನುವಾರ ಮುಂಜಾನೆ ಚೆನ್ನೈನಲ್ಲಿ ನಿಧನರಾದರು.
ತಮಿಳು ಚಿತ್ರರಂಗದಲ್ಲಿ ಮಯಿಲ್ ಸಾಮಿ 39 ವರ್ಷಗಳ ಕಲಾ ಸೇವೆ ಸಲ್ಲಿಸಿದ್ದಾರೆ. ಇವರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು ನಟಿಸಿರುವ ಕೊನೆಯ ಚಿತ್ರ 'ಗ್ಲಾಸ್‌ಮೇಟ್'ಗಾಗಿ ಧ್ವನಿ ನೀಡಿದ್ದರು.
1984ರಲ್ಲಿ 'ಧವನಿ ಕಣವುಗಳು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಗಿಲ್ಲಿ, ಧೂಲ್, ಉತ್ತಮ ಪುತ್ರನ್, ಕಾಂಚನಾ ಮತ್ತು ಇತರ ಹಲವು ಚಿತ್ರಗಳಲ್ಲಿ ಅದ್ಭುತ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇವರಿಗೆ 2004 ರಲ್ಲಿ 'ಕಂಗಲಾಲ್ ಕೈದು ಸೇ' ಚಲನಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರದ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಲಭಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ, ಹಿರಿಯ ನಟ ಕಮಲ್ ಹಾಸನ್ ಸೇರಿದಂತೆ ಹಿರಿಯ ರಾಜಕೀಯ ಮುಖಂಡರು ಹಾಗೂ ಚಿತ್ರರಂಗದವರು ಮಯಿಲ್ ಸಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇವನ್ನೂ ಓದಿ: ತೆಲುಗು ನಟ ನಂದಮೂರಿ ತಾರಕ ರತ್ನ ಬೆಂಗಳೂರಿನಲ್ಲಿ ನಿಧನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.