ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2 | ಡಾಲಿಯ ಮೌನದ ನಡುವೆ ಕರತಾಡನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 23:47 IST
Last Updated 4 ಜುಲೈ 2024, 23:47 IST
<div class="paragraphs"><p>ಪ್ರಜಾವಾಣಿ ಸಿನಿ ಸಮ್ಮಾನ ಸಮಾರಂಭದಲ್ಲಿ ನಟ ಧನಂಜಯ ಅವರಿಗೆ ‘ವರ್ಷದ ಅತ್ಯುತ್ತಮ ಸಾಧನೆ’ ಪ್ರಶಸ್ತಿ ನೀಡಲಾಯಿತು </p></div>

ಪ್ರಜಾವಾಣಿ ಸಿನಿ ಸಮ್ಮಾನ ಸಮಾರಂಭದಲ್ಲಿ ನಟ ಧನಂಜಯ ಅವರಿಗೆ ‘ವರ್ಷದ ಅತ್ಯುತ್ತಮ ಸಾಧನೆ’ ಪ್ರಶಸ್ತಿ ನೀಡಲಾಯಿತು

   

ಪ್ರಜಾವಾಣಿ ಚಿತ್ರ/ ರಂಜು ಪಿ

ಗಂಭೀರ ನಡೆಯೊಂದಿಗೆ ವೇದಿಕೆಯ ಮೇಲೆ ಬಂದರು. ಸಭಿಕರಿಂದ ಸಣ್ಣ ಮಕ್ಕಳು ಪ್ರೀತಿಯಿಂದ ಕೂಗು ಹಾಕಿದರು ’ಡಾಲಿ.. ಡಾಲಿ‘ ಆ ಕಡೆ ಸಣ್ಣದೊಂದು ನೋಟ ಬೀರಿದರು. ಕೈಬೀಸಬೇಕೆಂಬ ಆಸೆಯನ್ನು ಅದುಮಿಟ್ಟು, ಸಭಾ ಮರ್ಯಾದೆಯತ್ತ ಹೆಚ್ಚು ಗಮನಕೊಟ್ಟರು.

ADVERTISEMENT

ಸಂಭ್ರಮ ಮತ್ತು ಸಂಘರ್ಷಗಳ ನಡುವೆ ಬಂದಂತೆ ಬಂದವರೇ ಗಂಭೀರವಾಗಿ ಪ್ರಜಾವಾಣಿ ಸಿನಿ ಸಮ್ಮಾನ ಗೌರವವನ್ನು ಸ್ವೀಕರಿಸಿದರು. ಕರುನಾಡ ಕರ್ನಾಟಕ ಸುಂದರಿಯು ಹೊಂಬಣ್ಣದ ಹೂಬಳ್ಳಿಯನ್ನು ಹೊತ್ತಿರುವ ಪ್ರಶಸ್ತಿಯನ್ನು ಹಿಡಿಯುವುದೇ ಖುಷಿ ಎಂಬಂತೆ ಸ್ವೀಕರಿಸಿದರು.

ಅನುಶ್ರೀ ಅವರು ‘ಮೌನವಾಗಿಯೇ ಉಳಿದು ಬಿಟ್ಟೆ’ ಸಾಲುಗಳ ಬಗ್ಗೆ ನೆನಪಿಸಿದರು. ಕನ್ನಡದ ಕಾರು, ಆಟೊಗಳ ಮೇಲೆಯೂ ರಾರಾಜಿಸಿರುವ ಈ ಸಾಲುಗಳನ್ನು ಒಮ್ಮೆ ಹೇಳುವಿರಾ ಎಂದು ಕೇಳಿದಾಗ.. ಒಂದರೆ ಗಳಿಗೆ ಆ ಸಾಲುಗಳನ್ನು ನೆನಪಿಸಿಕೊಂಡರು.

'ಓ ಬದುಕೇ ನೀನು ಮೌನವಾಗಿಯೇ ಉಳಿದುಬಿಟ್ಟೆ....!! ಎಂತೆಂಥ ಪ್ರಶ್ನೆಗಳನ್ನಿಟ್ಟೆ? ಎಂತೆಂಥ ಪೋಷಾಕು ತೊಟ್ಟೆ? ಉದ್ದಗಲಕ್ಕೂ ಮಿತಿಗಳನ್ನೇ ಇಟ್ಟು ಮಿತಿಮೀರಲು ಒಮ್ಮೊಮ್ಮೆ ಅನುಭವಿಸು ಎಂದು ಮೌನವಾಗಿಯೇ ಉಳಿದಬಿಟ್ಟೆ... 

ಹೇಳುತ್ತಲೇ ಒಂದೆರಡು ಸೆಕೆಂಡುಗಳ ಬ್ರೇಕು ಪಡೆದು, ಸಾಲುಗಳು ನೆನಪಾಗ್ತಿಲ್ವಲ್ಲ ಅಂದವರೇ ಮುಂದಿನ ಸಾಲಿಗೆ ನಡೆದರು.. ’ಏನೇನೆಲ್ಲಾ ಗಳಿಸಿಕೊಟ್ಟೆ. ಏನೇನೆಲ್ಲಾ ಕಳೆದುಬಿಟ್ಟೆ. ಏನೇನೆಲ್ಲಾ ಕಲಿಸಿ. ಏನೇನೆಲ್ಲಾ ಮರೆಸಿ ಸುಖ ದುಖ ನಿನ್ನದು ಎಂದು ನೀನು ಮೌನವಾಗಿಬಿಟ್ಟೆ. ಓ ಬದುಕೇ ನೀನು ಮೌನವಾಗಿಯೇ ಉಳಿದುಬಿಟ್ಟೆ..!‘

 ಬದುಕು ಮೌನವಾದ ಕುರಿತು, ಮೈಯೆಲ್ಲ ಕಿವಿಯಾಗಿಸಿಕೊಂಡಿದ್ದ ಸಭಿಕರ ಉಸಿರಾಟ ಬಿಟ್ಟರೆ ಏನೂ ಕೇಳುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡವರೆಲ್ಲ ಕರತಾಡನ ಮಾಡಿ, ಮೆಚ್ಚುಗೆ ಸ್ವೀಕರಿಸಿದರು. 

ಸಂಭ್ರಮದಿಂದಲೇ ಧನಂಜಯ ಪ್ರೀತಿಯಿಂದ ‘ವರ್ಷದ ಅತ್ಯುತ್ತಮ ಸಾಧನೆ’ ಗೌರವವನ್ನು ಎದೆಗಾನಿಕೊಂಡು ವೇದಿಕೆಯಿಂದ ಇಳಿದರು. ಇಳಿದಾಗಲೂ ಅದೇ ಪ್ರೀತಿಯ ಕರೆ ’ಡಾಲಿ... ಡಾಲಿ..‘ ಅನುರಣಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.