ADVERTISEMENT

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ | ವಿಭಾಗ ಐದು: ನಾಮನಿರ್ದೇಶಿತರು ಇವರು

​ಪ್ರಜಾವಾಣಿ ವಾರ್ತೆ
Published 22 ಮೇ 2024, 23:30 IST
Last Updated 22 ಮೇ 2024, 23:30 IST
   

‘ಪ್ರಜಾವಾಣಿ’ಗೆ 75 ತುಂಬಿದ ಸಂದರ್ಭದಲ್ಲಿ ಚಂದನವನದ ಪ್ರತಿಭೆಗಳನ್ನು ಗುರುತಿಸುವ ಹಾಗೂ ಭಾರತೀಯ ಸಿನಿಮಾರಂಗದಲ್ಲಿ ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿಹಿಡಿಯುವ ಉದ್ದೇಶದೊಂದಿಗೆ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಪ್ರಶಸ್ತಿಯು ಆರಂಭಗೊಂಡಿತು. 2023ರ ಜೂನ್‌ನಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ 2022ರಲ್ಲಿ ಬಿಡುಗಡೆಗೊಂಡ ಸಿನಿಮಾಗಳನ್ನು ಪರಿಗಣಿಸಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಇದೀಗ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. 2023ನೇ ಸಾಲಿನ ಸಿನಿಮಾಗಳ ಪೈಕಿ ಪ್ರಶಸ್ತಿಗೆ ನಾಮನಿರ್ದೇಶಿತರಾದವರನ್ನು ತಿಳಿಸುವ ಸಮಯ ಇದಾಗಿದೆ. 15 ವಿಭಾಗಗಳಲ್ಲಿ ಪ್ರತಿಭಾವಂತರನ್ನು ಆಯ್ಕೆಮಾಡಲು ಪರಿಣತರ ತಂಡವು ನಾಮನಿರ್ದೇಶನಗಳನ್ನು ಮಾಡಿದೆ. ಚಲನಚಿತ್ರಗಳನ್ನು ವೀಕ್ಷಿಸಿದ 20 ಪರಿಣತರು ಪ್ರತಿ ವಿಭಾಗದಲ್ಲಿ ಐದು ಪ್ರತಿಭಾವಂತರ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಚಿತ್ರರಂಗದ ಸಂಘ–ಸಂಸ್ಥೆಗಳ ಒಂದು ಸಾವಿರಕ್ಕೂ ಅಧಿಕ ಸದಸ್ಯರು ಮತ ಹಾಕುವ ಮುಖಾಂತರ ವಿಜೇತರಾಗಿ ಆಯ್ಕೆ ಮಾಡಲಿದ್ದಾರೆ. ಯಾವ ವಿಭಾಗದಲ್ಲಿ ಪ್ರಶಸ್ತಿ ಯಾರ ಮುಡಿಗೇರಲಿದೆ ಎನ್ನುವುದು ‘ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲೇ ಘೋಷಣೆಯಾಗಲಿದೆ.

ADVERTISEMENT

ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಪರಿಣತರು ನಾಮನಿರ್ದೇಶನಕ್ಕೆ ಆಯ್ಕೆ ಮಾಡಿದವರ ಹೆಸರುಗಳನ್ನು ಮುಖ್ಯತೀರ್ಪುಗಾರರು ಅನುಮೋದಿಸಿದ್ದಾರೆ. ಮೊದಲ ಹಂತವಾಗಿ ಐದು ವಿಭಾಗಗಳಲ್ಲಿ
ನಾಮನಿರ್ದೇಶಿತರಾದವರ ಹೆಸರು, ಸಿನಿಮಾಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಇನ್ನಷ್ಟು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರುಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.