56ನೇ ವಯಸ್ಸಿನಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ.
ಹನ್ನೊಂದು ವರ್ಷಗಳ ಹಿಂದೆ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು ಪ್ರೇಮಿಸಿ ಪ್ರಕಾಶ್ ರಾಜ್ ವಿವಾಹವಾಗಿದ್ದರು.
ಕುತೂಹಲಕರ ವಿಚಾರವೆಂದರೆ, ಖ್ಯಾತ ನಟ ಪ್ರಕಾಶ್ ರಾಜ್ ಮತ್ತೆ ಪೋನಿ ವರ್ಮಾ ಅವರನ್ನೇ ಮದುವೆಯಾಗಿದ್ದಾರೆ.
ಅವರ ಪುತ್ರ ವೇದಾಂತ್‌ಗಾಗಿ ಈ ಮದುವೆಯನ್ನು ಏರ್ಪಡಿಸಲಾಗಿತ್ತು ಎಂದು ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.
ಅವರು ಹಂಚಿಕೊಂಡಿರುವ ವಿವಾಹದ ಚಿತ್ರಗಳು ವೈರಲ್ ಆಗಿದ್ದು, ಪ್ರಕಾಶ್ ರಾಜ್ ಹೆಸರು ಟ್ರೆಂಡಿಂಗ್‌ನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.