ನಟ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕನಾಗಿರುವ ‘ಪ್ರಾರಂಭ’ ಸಿನಿಮಾ ಕುತೂಹಲ ಹೆಚ್ಚಿಸಿದೆ. ಸಮಾಜದಿಂದ ಪ್ರತ್ಯೇಕವಾಗಿರುವ ಯುವಕ, ಯುವತಿಯರಿಗೆ ಒಂದೊಳ್ಳೆ ಸಂದೇಶ ಸಾರುವ ಸಿನಿಮಾ ಇದು. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ ಮತ್ತು ಮೈಸೂರಿನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮನೋರಂಜನ್ ಹಾಗೂ ನಾಯಕಿ ಕೀರ್ತಿ ಕಲಕೇರಿ ನಟಿಸಿದ ಹಾಡಿನ ಶೂಟಿಂಗ್ ಇತ್ತೀಚೆಗೆ ನಡೆಯಿತು. ಈ ಹಾಡಿಗೆ ಕಿಶೋರ್ ನೃತ್ಯ ಸಂಯೋಜಿಸಿದ್ದಾರೆ.
ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಜಗದೀಶ್ ಕಲ್ಯಾಡಿ ಆರ್ಥಿಕ ಇಂಧನ ಒದಗಿಸುತ್ತಿದ್ದಾರೆ. ಮನೋರಂಜನ್ ಮೂರು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದೆ. ಶೀಘ್ರವೇ, ಟ್ರೇಲರ್ ಹಾಗೂ ಆಡಿಯೊ ಬಿಡುಗಡೆಗೆ ನಿರ್ಧರಿಸಿದೆ.
ಪ್ರಜ್ವಲ್ ಪೈ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್‍ಬಾಬು ಅವರ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.