‘ತುಂಬಾ ಮುಖ್ಯವಾದ ವಿಚಾರ. ನಟಭಯಂಕರ ಚಿತ್ರವು ಬಹಳ ಅದ್ದೂರಿಯಾಗಿ, ಅಚ್ಚುಕಟ್ಟಾಗಿ ಬರ್ತಾ ಇದೆ. ಬಹಳ ಮುಖ್ಯವಾಗಿ ಇದು ನನ್ನ ಚಿತ್ರರಂಗದ ಕೊನೆಯ ಸಿನಿಮಾ...’
ಈ ರೀತಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡವರು ಬಿಗ್‌ಬಾಸ್ ಖ್ಯಾತಿಯ ನಟ ಪ್ರಥಮ್ ಅರ್ಥಾತ್ ಒಳ್ಳೆ ಹುಡುಗ ಪ್ರಥಮ್. ಫೇಸ್‌ಬುಕ್‌ನಲ್ಲಿ ಅವರು ಬರೆದುಕೊಂಡ ಇನ್ನಿತರ ಮಾಹಿತಿ ಇಲ್ಲಿದೆ ಓದಿ.
ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಊರಿನಲ್ಲಿ ವ್ಯವಸಾಯ ಮಾಡೋಣ ಅಂತ ನಿರ್ಧಾರ ಮಾಡಾಯ್ತು.ಇದರ ಜೊತೆಗೆ ನನ್ನ ಮದುವೆ ವಿಚಾರದ ಬಗ್ಗೆಯೂ ಮನೆಯಲ್ಲಿ ಚರ್ಚೆ ನಡೀತಾ ಇದೆ! ಮದುವೆ ಆಗುವ ಮುನ್ನವೇ ಊರಿನಲ್ಲಿ ಸೆಟಲ್ ಆಗೋಣ ಅನ್ನೋದು ಮನೆಯವರ ಆಸೆ.
ಈಗಾಗಲೇ ತೋಟದಲ್ಲಿ 200 ತೆಂಗಿನ ಸಸಿಗಳನ್ನ ನೆಟ್ಟು ಮಾದರಿ ರೈತನಾಗಬೇಕೆಂದು ಅದರ ಕಡೆ ಪ್ರಯತ್ನ ಪಡ್ತಾ ಇದೀನಿ. ಬೆಂಗಳೂರು ಬೋರಾಗಿದೆ. ‘ನಟಭಯಂಕರ’ ನನ್ನ ಕಡೆಯ ಸಿನಿಮಾ. ಮನೆಯವರ ಒತ್ತಡಕ್ಕೆ ಮಣಿದು ಮದುವೆ ಆಗುವುದರ ಬಗ್ಗೆ ಚಿಂತಿಸುತ್ತಿದ್ದೀನಿ.
ನಮ್ ಗುರುಗಳು ಶ್ರೀಕಾಂತ್ ಪ್ರೇಮ್‌ಕುಮಾರ್ ಸರ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷರಾದ ಸೂರಪ್ಪಬಾಬು, ಸುಮ್ನೆ ಬೆಂಗಳೂರಲ್ಲಿ ಇದ್ದು ಕೆಲಸ ಮಾಡು. ಎಲ್ಲಿಗೂ ಹೋಗ್ಬೇಡ ಅಂದಿದ್ದಾರೆ. ಒಂದು ಸಿನಿಮಾದಿಂದ ನೂರು ಜನ ಅನ್ನ ತಿಂತಾರೆ. ಬಾಯ್ ಮುಚ್ಚಿಕೊಂಡು ನನ್ನ ಮಾತು ಕೇಳು. ಇಲ್ಲೇ ಇದ್ದು ಸಿನಿಮಾ ಮಾಡು ಅಂದಿದ್ದಾರೆ. ನೋಡೋಣ. ನನಗಂತೂ ದೇವ್ರಾಣೆ ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ.!
ಪ್ರಥಮ್ ಅವರು ಈ ಹಿಂದೆ ‘ದೇವ್ರಂಥ ಮನುಷ್ಯ’ ಚಿತ್ರದಲ್ಲಿ ನಾಯಕನಟನಾಗಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.