ADVERTISEMENT

ನಟ ಸುದೀಪ್ ತಾಯಿ ಸರೋಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದ ಪ್ರಧಾನಿ ಮೋದಿ

ಅಕ್ಟೋಬರ್ 23ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಸುದೀಪ್ ಅವರಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2024, 13:49 IST
Last Updated 28 ಅಕ್ಟೋಬರ್ 2024, 13:49 IST
<div class="paragraphs"><p>ನಟ ಸುದೀಪ್ ತಾಯಿ ಸರೋಜಾ</p></div>

ನಟ ಸುದೀಪ್ ತಾಯಿ ಸರೋಜಾ

   

ಬೆಂಗಳೂರು: ನಟ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ (74) ಅವರು ಇತ್ತೀಚೆಗೆ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುದೀಪ್ ಅವರಿಗೆ ಪತ್ರ ಬರೆದು ಧೈರ್ಯ ತುಂಬಿದ್ದಾರೆ.

ಅಕ್ಟೋಬರ್ 23ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಸುದೀಪ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಸದ್ಯ ಸುದೀಪ್ ಅವರು ಈಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ‘ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ’ ಎಂದು ಮೋದಿ ಅವರಿಗೆ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

ADVERTISEMENT

ಪತ್ರದಲ್ಲಿ ಏನಿದೆ?

‘ನಿಮ್ಮ ತಾಯಿಯ ನಿಧನ ಸುದ್ದಿ ತಿಳಿದು ತೀವ್ರ ದುಃಖವಾಯಿತು. ತಾಯಿಯನ್ನು ಕಳೆದುಕೊಂಡರೆ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟ ಎಂದು ನನಗೆ ಗೊತ್ತು‘ ಎಂದು ಪತ್ರದಲ್ಲಿ ಮೋದಿ ಅವರು ಹೇಳಿದ್ದಾರೆ.

‘ಈ ಪ್ರಪಂಚದಲ್ಲಿ ತಾಯಿ ವಾತ್ಸಲ್ಯದ ಮುಂದೆ ಯಾವುದೂ ದೊಡ್ಡದಿಲ್ಲ. ನೀವು ನಿಮ್ಮ ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದಿರೆಂದು ಕೇಳಿ ತಿಳಿದುಕೊಂಡೆವು. ಅವರಿಲ್ಲದ ಕ್ಷಣಗಳು ನಿಮಗೆ ನಿಮ್ಮ ಕುಟುಂಬಕ್ಕೂ ತುಂಬ ಕಠಿಣವಾದದ್ದು. ಅವರ ನೆನಪುಗಳು ಸದಾ ನಿಮ್ಮೊಂದಿಗೆ ಇರಲಿವೆ. ಹಾಗೇ ನಮ್ಮೆಲ್ಲರಿಗೂ ಅವರು ಪ್ರೇರಣೆಯಾಗಲಿದ್ದಾರೆ‘ ಎಂದು ಹೇಳಿದ್ದಾರೆ.

‘ನಿಮ್ಮ ತಾಯಿ ಅವರ ನಿಧನಕ್ಕೆ ನಮ್ಮ ಸಂತಾಪಗಳು. ಆ ದುಃಖದಿಂದ ನೀವು, ನಿಮ್ಮ ಕುಟುಂಬದವರು ಆದಷ್ಟು ಬೇಗ ಹೊರಗೆ ಬರಲೆಂದು ಪ್ರಾರ್ಥಿಸುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಿರುವ ಸುದೀಪ್ ಅವರು, ‘ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ನನ್ನ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ‘ ಎಂದು ಹೇಳಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 20 ರಂದು ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.