ಕಣ್ಸನೆ ಮೂಲಕ ರಾತ್ರೋರಾತ್ರಿ ಖ್ಯಾತಿ ಗಳಿಸಿದ ಪ್ರಿಯಾ ಪ್ರಕಾಶ್ ವಾರಿಯರ್ ಶೀಘ್ರದಲ್ಲೇ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಕನ್ನಡ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಪ್ರಿಯಾ ಇನ್ನೂ ಸಹಿ ಹಾಕಿಲ್ಲ.
ಡಿ. ರಘು ಕೋವಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ತ್ರಿಶ್ಯೂರ್‌ನಲ್ಲಿರುವ ಪ್ರಿಯಾ ಮನೆಗೆ ಹೋಗಿ ನಿರ್ದೇಶಕರು ಚಿತ್ರದ ಕಥೆ ಹೇಳಿದ್ದಾರೆ. ಚಿತ್ರದ ಬಗ್ಗೆ ಪ್ರಿಯಾ ಆಸಕ್ತಿ ತೋರಿದ್ದು, ವಾರದಲ್ಲಿ ಒಪ್ಪಿಗೆ ನೀಡುವ ನಿರೀಕ್ಷೆಯಿದೆ. ‘ಒರು ಅಡಾರ್ ಲವ್’ ಸಿನಿಮಾದ ನಂತರ ಪ್ರಿಯಾ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ತೆಲುಗು ನಿರ್ಮಾಪಕರೊಬ್ಬರು ಪ್ರಿಯಾಗೆ ಸಿನಿಮಾದ ಕಥೆಯೊಂದನ್ನು ಹೇಳಿದ್ದರು. ಆದರೆ, ಆ ಕಥೆ ಪ್ರಿಯಾಗೆ ಒಪ್ಪಿಗೆಯಾಗಿರಲಿಲ್ಲ.
ಎಲ್ಲವೂ ಅಂದುಕೊಂಡಂತೆ ಆದರೆ, ಪ್ರಿಯಾಳ ಹೊಸ ಸಿನಿಮಾ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಚಿತ್ರಕ್ಕೆ ಕನ್ನಡ ಸಿನಿಮಾದ ಗಣ್ಯರೊಬ್ಬರ ಮಗ ನಾಯಕನಾಗುವ ಸಾಧ್ಯತೆ ಇದೆ ಎನ್ನುತ್ತವೆ ಸಿನಿಮೂಲಗಳು.
ರಘು ಅವರಿಗೆ ಈ ಹಿಂದೆ ನಟ ಉಪೇಂದ್ರ, ಶಶಾಂಕ್ ಮತ್ತು ಪ್ರೇಮ್ ಅವರ ಜತೆಗೆ ಕೆಲಸ ಮಾಡಿದ ಅನುಭವವಿದೆ. ಬಿ.ಎಸ್. ಸುಧೀಂದ್ರ ಮತ್ತು ಇ. ಶಿವಪ್ರಕಾಶ್ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.