ADVERTISEMENT

ನನಗೆ ಹೊಟ್ಟೆಕಿಚ್ಚಾಗುತ್ತಿದೆ: ಸಹೋದರಿ ಫೋಟೊ ನೋಡಿ ಪ್ರಿಯಾಂಕ ಕಮೆಂಟ್!

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 6:42 IST
Last Updated 10 ಜೂನ್ 2021, 6:42 IST
ಪರಿಣಿತಿ ಚೋಪ್ರಾ ಬೀಚ್‌ನಲ್ಲಿ ಇರುವ ಫೋಟೊ
ಪರಿಣಿತಿ ಚೋಪ್ರಾ ಬೀಚ್‌ನಲ್ಲಿ ಇರುವ ಫೋಟೊ   

ಬೆಂಗಳೂರು: ನಟಿ ಪ್ರಿಯಾಂಕ ಚೋಪ್ರಾ ತನ್ನ ಸಹೋದರಿ ಪರಿಣಿತಿ ಚೋಪ್ರಾ ಫೋಟೊ ನೋಡಿ ಹೊಟ್ಟೆಕಿಚ್ಚಾಗುತ್ತಿದೆ ಎಂದುಕಮೆಂಟ್ ಮಾಡಿದ್ದಾರೆ!

ಪರಿಣಿತಿ ಚೋಪ್ರಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟರ್ಕಿ ಬೀಚ್‌ನಲ್ಲಿ ಇರುವ ಫೋಟೊ ಪೋಸ್ಟ್ ಮಾಡಿದ್ದರು.

ಪರಿಣಿತಿ ಚೋಪ್ರಾ ಫೋಟೊಗೆ ಅಭಿಮಾನಿಗಳು ಲೈಕ್ ಮಾಡಿದ್ದರೆ, ಪ್ರಿಯಾಂಕ ಚೋಪ್ರಾ ಮಾತ್ರ ಕಮೆಂಟ್ ಮೂಲಕ ಸಹೋದರಿಯ ಕಾಲೆಳೆದಿದ್ದಾರೆ.

ADVERTISEMENT

ನಟಿ ಪ್ರಿಯಾಂಕ ಪ್ರಸ್ತುತ ಸಿಟಾಡೆಲ್‌ ಟಿವಿ ಸರಣಿ ಚಿತ್ರೀಕರಣಕ್ಕಾಗಿಲಂಡನ್‌ನಲ್ಲಿದ್ದಾರೆ. ಅಲ್ಲದೆ, ಲಾಕ್‌ಡೌನ್ ಮುಂತಾದ ನಿರ್ಬಂಧಗಳಿಂದಾಗಿ ಹೊರಗಡೆ ಹೆಚ್ಚು ತಿರುಗಾಡಲು ಕೂಡ ಸಾಧ್ಯವಾಗುತ್ತಿಲ್ಲ.

ಇತ್ತ ಪರಿಣಿತಿ ಚೋಪ್ರಾ, ಕಪ್ಪು ಬಣ್ಣದ ಬಿಕಿನಿ ಧರಿಸಿ, ಟರ್ಕಿಯ ಸಮುದ್ರ ತೀರದಲ್ಲಿ ಕುಳಿತುಕೊಂಡ ಫೋಟೊ ಪೋಸ್ಟ್ ಮಾಡಿದ್ದು, ಈ ಚಿತ್ರ ತೆಗೆಯುವ ಮೊದಲುಪ್ರಾಣಾಯಾಮ ಮಾಡುತ್ತಿದ್ದೆ, ಆದರೆ ಅದು ಸುಳ್ಳುಎಂದು ಅಡಿಬರಹ ನೀಡಿದ್ದರು.

ಟರ್ಕಿ ಬೀಚ್‌ನಲ್ಲಿ ಇರುವ ಫೋಟೊ

ಪರಿಣಿತಿ ಪೋಸ್ಟ್‌ಗೆ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಕೂಡ ಉಫ್ ಎಂದು ಕಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.