ADVERTISEMENT

ಪ್ರಿಯಾಂಕಾ ಚೋಪ್ರಾ ಕೊನೆಗೂ ತಮ್ಮ ನ್ಯೂಯಾರ್ಕ್‌ನ ರೆಸ್ಟೂರೆಂಟ್‌ಗೆ ಭೇಟಿ ನೀಡಿದರು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2021, 9:17 IST
Last Updated 27 ಜೂನ್ 2021, 9:17 IST
ಸೋನಾ ರೆಸ್ಟೋರೆಂಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ
ಸೋನಾ ರೆಸ್ಟೋರೆಂಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ   

ನಟಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‌ ನಗರದ ಕೇಂದ್ರದಲ್ಲಿರುವ ತಮ್ಮ ಭಾರತೀಯ ರೆಸ್ಟೋರೆಂಟ್‌ ಸೋನಾಗೆ ಶನಿವಾರ ರಾತ್ರಿ ಭೇಟಿ ನೀಡಿದ್ದಾರೆ. ಲಂಡನ್‌ನಲ್ಲಿ ತಮ್ಮ ಮುಂಬರುವ ಚಿತ್ರ 'ಸಿಟೆಡಾಲ್‌'ನ ಚಿತ್ರೀಕರಣದಲ್ಲಿ ಮಗ್ನರಾಗಿರುವ ಪ್ರಿಯಾಂಕಾ ಬಿಡುವು ಮಾಡಿಕೊಂಡು ರೆಸ್ಟೋರೆಂಟ್‌ಗೆ ಬಂದಿದ್ದಾರೆ.

ಕಳೆದ ವರ್ಷ ರೆಸ್ಟೋರೆಂಟ್‌ ಆರಂಭದ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ತಮ್ಮದೇ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಪ್ರಿಯಾಂಕಾ ತಮಗೆ ಪ್ರಿಯವಾದ ಭಾರತೀಯ ತಿನಿಸುಗಳನ್ನು ಸವಿದಿದ್ದಾರೆ.

ದೋಸೆ,ಸೀಗಡಿ ಖಾದ್ಯ, ಪಕೋಡಾ ಮತ್ತು ಗೋಲ್ಗಪ್ಪ ತಿನ್ನುತ್ತಿರುವ ಫೋಟೊವನ್ನು ಸಾಮಾಜಿಕ ತಾಣಗಳಲ್ಲಿ ಪ್ರಿಯಾಂಕಾ ಪೋಸ್ಟ್‌ ಮಾಡಿದ್ದಾರೆ.

ADVERTISEMENT

'ನಾನು ಸೋನಾ ನ್ಯೂಯಾರ್ಕ್‌ ರೆಸ್ಟೋರೆಂಟ್‌ನಲ್ಲಿದ್ದೇನೆ ಎಂದು ನನಗೇ ನಂಬಲಾಗುತ್ತಿಲ್ಲ. ರೆಸ್ಟೋರೆಂಟ್‌ ತೆರೆಯುವ ಯೋಜನೆಯಲ್ಲಿ ಪಾಲ್ಗೊಂಡ ನೌಕರರನ್ನುಮೂರು ವರ್ಷಗಳ ನಂತರ ನೋಡುತ್ತಿರುವುದು ಖುಶಿಯಾಗಿದೆ' ಎಂದು ಪ್ರಿಯಾಂಕಾ ಹೇಳಿದ್ದಾರೆ.

'ಸೋನಾ ನ್ಯೂಯಾರ್ಕ್‌ನ ಅಡುಗೆ ಮನೆಗೆ ಹೋಗಿ, ಅಲ್ಲಿನ ತಂಡದ ಸದಸ್ಯರನ್ನು ಭೇಟಿಯಾದಾಗ ಹೃದಯ ತುಂಬಿ ಬಂತು. ನನ್ನ ಹೆಸರಲ್ಲಿರುವ ಖಾಸಗಿ ಡೈನಿಂಗ್‌ ಹಾಲ್‌ 'ಮಿಮಿ'ಯಿಂದ, ಅತ್ಯದ್ಭುತ ಒಳಾಂಗಣ ವಿನ್ಯಾಸ, ಭಾರತೀಯ ಕಲಾವಿದರ ಸುಂದರ ಕಲಾಕೃತಿಗಳು ಮತ್ತು ರುಚಿಕರ ಆಹಾರ ಖಾದ್ಯಗಳು ಮತ್ತು ಪಾನಿಯಗಳು ಎಲ್ಲವೂ ವಿಶೇಷ ಅನುಭವವನ್ನು ನೀಡಿದವು. ನ್ಯೂಯಾರ್ಕ್‌ನ ಹೃದಯ ಭಾಗದಲ್ಲಿ ಇರುವ ರೆಸ್ಟೋರೆಂಟ್‌ ನನ್ನ ಹೃದಯವೇ ಆಗಿದೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಬರೆದಿದ್ದಾರೆ.

ರೆಸ್ಟೋರೆಂಟ್‌ಗೆ ಸೋನಾ ಎಂಬ ಹೆಸರನ್ನು ಪತಿ ನಿಕ್‌ ಜೋನಸ್‌ ನೀಡಿದ್ದಾಗಿ ಈ ಹಿಂದೆ ಪ್ರಿಯಾಂಕಾ ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.