ಕನ್ನಡದ ‘ರೋಹಿತಾಶ್ವಿನ್’ ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಾಗುತ್ತಿದೆ. ಅದಾಗಲೇ ಇನ್ನೆರಡು ಸಿನಿಮಾಗಳು ಚಿತ್ರೀಕರಣಕ್ಕೆ ಸಜ್ಜಾಗಿವೆ. ಒಂದರ ಹಿಂದೆ ಇನ್ನೊಂದರಂತೆ ತುಳುಹಾಗೂ ಕನ್ನಡ ಎರಡರಲ್ಲೂ ಬೇಡಿಕೆಯ ನಟನಾಗಿ ಬೆಳೆಯುತ್ತಿದ್ದಾರೆ ಗುರುಪುರದ ಶ್ರೀಕಾಂತ್ ರೈ.
ಒಬ್ಬ ನಾಯಕ ನಟನಿಗೆ ತಕ್ಕುದಾದ ದೇಹದಾರ್ಢ್ಯ, ಆಕರ್ಷಕ ಮುಖ ಲಕ್ಷಣವೇ ಶ್ರೀಕಾಂತ್ ಅವರಿಗೆ ಪ್ಲಸ್ ಪಾಯಿಂಟ್. ಸಿನಿಮಾ ಕ್ಷೇತ್ರ ಬಾಲ್ಯದಿಂದ ಕಟ್ಟಿಕೊಂಡ ಕನಸಲ್ಲ. ಆದರೂ ಇಂದುಸಿನಿಮಾಗಳಲ್ಲಿ ನಟಿಸಿ, ನಟನಾ ಕೌಶಲವನ್ನು ಗಟ್ಟಿ ಮಾಡಿಕೊಳ್ಳುವ ಆಸೆ ಇವರದ್ದ.
ಓದಿದ್ದು ಎಂಬಿಎ. ಶಿಕ್ಷಣ ಮುಗಿಸಿದೊಡನೆ ವಿದೇಶದಲ್ಲಿ ಕೆಲಸ ತಯಾರಿದ್ದರೂ, ಸಿನಿಮಾ ಕ್ಷೇತ್ರವನ್ನು ಫುಲ್‌ಟೈಮ್ ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಶ್ರೀಕಾಂತ್ ನಿಟ್ಟೆ ಕಾಲೇಜಿನಲ್ಲಿ ಎಂಬಿಎ ಓದುತ್ತಿರುವಾಗಲೇ ಮಂಗಳೂರಿನ ಬಿಗ್‌ಎಫ್‌ಎಂ ನಲ್ಲಿ ಸಂಜೆ ಹೊತ್ತು ಆರ್‌ಜೆ ಆಗಿ ಕೆಲಸ ನಿರ್ವಹಿಸಿದವರು. ರೇಡಿಯೊಗೆಬರುತ್ತಿದ್ದ ಸಿನಿಮಾ ನಟರನ್ನು ನೋಡಿ,ತಾನೂ ಸಿನಿಮಾ ನಟನಾಗಬೇಕು, ಅಭಿನಯಿಸಬೇಕು ಎಂಬ ಕನಸು ಚಿಗುರಿತ್ತಂತೆ. ಅದಕ್ಕಾಗಿ ನಿರ್ದೇಶಕ ಮಧು ಸುರತ್ಕಲ್ ಅವರ ಸಲಹೆಯಂತೆ, ಬೆಂಗಳೂರಿನ ಸುಚಿತ್ರಾ ಫಿಲ್ಮ್ ಅಕಾಡೆಮಿಯಲ್ಲಿ ಅಭಿನಯ ತರಬೇತಿಯನ್ನು ಪಡೆದಿದ್ದಾರೆ.
ಅಲ್ಲಿ ನಿರ್ದೇಶಕ ಜೋಸೆಫ್ ನೀನಾಸಂ ಪರಿಚಯವಾಗಿದ್ದು, ತಮ್ಮ ನಿರ್ದೇಶನದ ‘ರೋಹಿತಾಶ್ವನ್’ ಸಿನಿಮಾದಲ್ಲಿ ನಾಯಕನಾಗುವ ಅವಕಾಶ ನೀಡಿದ್ದಾರೆ. ರಂಗ ತರಬೇತಿ, ನಾಟಕಗಳಅಭಿನಯದ ಜೊತೆ, ದೇಹದ ಸೌಂದರ್ಯಕ್ಕೆ ಬೇಕಾದ ತಾಲೀಮು, ಮೂರು ವರ್ಷ ಫೈಟಿಂಗ್ ತರಗತಿಗೆ ಹೋಗಿ ತಮ್ಮನ್ನು ಪರಿಪೂರ್ಣ ನಟನಾಗಿ ಶ್ರೀಕಾಂತ್ ಸಿದ್ಧಗೊಳಿಸಿದ್ದರು.
ಆಗಲೇ, ಮೂವರು ನಾಯಕರನ್ನೊಳಗೊಂಡ ತುಳುವಿನ ‘ಬರ್ಕೆ’ ಸಿನಿಮಾದ ಒಬ್ಬ ನಾಯಕರಾಗಿ ನಟಿಸುವ ಅವಕಾಶ ಬಂದಿತ್ತು. ನಂತರ ‘ಆಯೆ ಏರ್’ ಸಿನಿಮಾದಲ್ಲೂ ನಾಯಕನಾಗಿ ಅಭಿನಯಿಸಿದರು. ಇನ್ನೊಂದು ಸಿನಿಮಾ‘ರೋಹಿತಾಶ್ವಿನ್’ ಬಿಡುಗಡೆಗೆ ತಯಾರಾ
ಗಿದೆ. ಇದರ ಮಧ್ಯದಲ್ಲಿ ಕನ್ನಡದ ‘ಅರಿಷಡ್ವರ್ಗ’ ಮತ್ತು ‘ಡಾನ್ ಕುಮಾರ’ ಸಿನಿಮಾಗಳಲ್ಲೂ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗಾಗಿ, ಈಗಾಗಲೇ ಐದು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಪ್ರಸ್ತುತ ಇವರ ಕೈಯಲ್ಲಿ ಒಂದುಕನ್ನಡ, ಮತ್ತೊಂದು ತುಳು ಸಿನಿಮಾಗಳು ಇವೆ. ‘ಎರಡು ಸಿನಿಮಾಗಳ ಚಿತ್ರೀಕರಣದ ಮಧ್ಯೆ ಸ್ವಲ್ಪ ಅಂತರ ಇರಬೇಕು. ಏಕೆಂದರೆ, ನಾವು ಮೊದಲ ಸಿನಿಮಾದ ಗುಂಗಿನಿಂದ ಹೊರಬಂದು, ಇನ್ನೊಂದಕ್ಕೆ ತಯಾರಿ ಮಾಡಿಕೊಂಡೇ ಚಿತ್ರೀಕರಣಕ್ಕೆ ಬರಬೇಕು ಎಂಬುದು ನನ್ನ ಪಾಲಿಸಿ’ ಎನ್ನುತ್ತಾರೆ ಶ್ರೀಕಾಂತ್
‘ಅಪ್ಪ ಅಮ್ಮ ಇಬ್ಬರೂ ವಿದೇಶದಲ್ಲಿದ್ದಾರೆ. ಎಂಬಿಎ ಮುಗಿಸಿದಾಗ ನನಗೂಅಲ್ಲೇ ಕೆಲಸ ಸಿದ್ಧಗೊಂಡಿತ್ತು. ಆದರೆನಾನು ಕೆಲಸ ನಿರಾಕರಿಸಿ, ಸಿನಿಮಾ ಆಯ್ಕೆಮಾಡಿಕೊಂಡೆ. ಪೋಷಕರುನನ್ನ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಒಪ್ಪಿದ್ದರು. ಇನ್ನಷ್ಟು ಪ್ರೋತ್ಸಾಹನೀಡುತ್ತಿದ್ದಾರೆ.
ಪ್ರತಿಯೊಂದು ಸಿನಿಮಾ ಮಾಡಿದಾಗಲೂ ಅಪ್ಪ ನನ್ನ ಅನುಭವದಬಗ್ಗೆ ವಿಚಾರಿಸುತ್ತಾರೆ. ನನಗಿಂತ ಹೆಚ್ಚುಆಸಕ್ತಿ ಅವರಲ್ಲಿರುವುದು ಹೆಚ್ಚು ಖುಷಿಯೆನಿಸುತ್ತದೆ’ ಎನ್ನುತ್ತಾರೆಇವರು.
ಪ್ರತಿಯೊಂದು ಸಿನಿಮಾಗಳು ನಮಗೆಹೊಸತನ್ನು ಕಲಿಸುತ್ತವೆ. ಸಿನಿಮಾದಲ್ಲಿನ ವಿಭಿನ್ನ ಪಾತ್ರಗಳು, ಸುತ್ತಲಿನ ಜನರು ನಮ್ಮನ್ನು ಇನ್ನಷ್ಟು ಬಲಾಢ್ಯರನ್ನಾಗಿಸುತ್ತಾರೆ. ಪ್ರಾರಂಭದಲ್ಲಿ ಹೆಚ್ಚು ಸಿನಿಮಾ ಮಾಡಬೇಕು ಎಂಬುದಿತ್ತು. ಆದರೀಗ, ಸಂಖ್ಯೆಗಿಂತ ಒಳ್ಳೆ ಕಥೆ ಇರುವಸಿನಿಮಾ ಮಾಡುವಂತಹ ಯೋಚನೆಯನ್ನು ‘ಅನುಭವ’ ಬೆಳೆಸಿದೆ. ಸಿನಿಮಾಕ್ಕೆ ಭಾಷೆ ಸಮಸ್ಯೆಯಾಗುವುದಿಲ್ಲ. ಉತ್ತಮ ಕಥೆಯಿದ್ದರೆ ಭಾಷೆಯ ಹಂಗಿಲ್ಲದೇ, ಹೆಚ್ಚು ಜನರನ್ನು ತಲುಪಲು ಸಾಧ್ಯ’ ಎಂಬುದು ಇವರ ಅಂಬೋಣ.
ಚಂದ ಇದ್ದೇನೆ. ಚೆನ್ನಾಗಿಯೇ ಅಭಿನಯಿಸುತ್ತಿದ್ದೇನೆ ಎಂದುಆರಂಭದಲ್ಲಿ ಅಂದುಕೊಂಡಿದ್ದೆನು. ಆದರೆ, ‘ಅಭಿನಯ’ ಎಂಬ ಸಮುದ್ರಕ್ಕೆ ಇಳಿದ ಮೇಲೆಯೇ ತಿಳಿದಿದ್ದು, ಕೇವಲ ಕೈಕಾಲು ಬಡಿದರೆ ಮಾತ್ರ ಈಜು ಬಾರದು. ಕಲಿಯಲು ಸಾಕಷ್ಟಿದೆ.
–ಶ್ರೀಕಾಂತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.