ADVERTISEMENT

ಆಲಿಯಾ ಭಟ್ ವಿರುದ್ಧ ಪ್ರತಿಭಟನೆಯ ‘ಕೆಂಪು ದೀಪ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 7:50 IST
Last Updated 8 ಮಾರ್ಚ್ 2021, 7:50 IST
ಆಲಿಯಾ ಭಟ್
ಆಲಿಯಾ ಭಟ್   

‘ಗಂಗೂಬಾಯಿ ಕಾಠೇವಾಡಿ’ ಚಿತ್ರದ ನಾಯಕಿ ಆಲಿಯಾ ಭಟ್ ವಿರುದ್ಧ ಪ್ರತಿರೋಧದ ‘ಕೆಂಪು’ದೀಪ ಬೆಳಗಿದೆ. ವಿಷಯ ಇಷ್ಟೆ, ಚಿತ್ರದಲ್ಲಿ ಗಂಗೂಬಾಯಿ ಪಾತ್ರದ ಕಥಾ ಸನ್ನಿವೇಶ ಮುಂಬೈನ ಕಾಮಾಟಿಪುರದ ಸುತ್ತ ಸುತ್ತಿಕೊಂಡಿದೆ. ಆದರೆ, ಅದು ಅಲ್ಲಿನ ಜನಜೀವನವನ್ನು ಸರಿಯಾಗಿ ಬಿಂಬಿಸಿಲ್ಲ. ಬದಲಾಗಿ ಕೆಂಪುದೀಪ ಪ್ರದೇಶ ಎಂದೇ ಬಿಂಬಿಸಿದೆ ಎಂಬುದು ಈ ಆಕ್ಷೇಪಕ್ಕೆ ಕಾರಣ. ಆಲಿಯಾ ಭಟ್‌ ಚಿತ್ರದಲ್ಲಿ ವೇಶ್ಯಾವಾಟಿಕೆ ಪ್ರದೇಶದ ‘ಮೇಡಂ’ (ನಾಯಕಿ) ಆಗಿ ಅಭಿನಯಿಸುತ್ತಿದ್ದಾರೆ.

ಕಾಮಾಟಿಪುರ ಪ್ರದೇಶದ ಒಂದಿಷ್ಟು ಜನ ಸಮೂಹ ಚಿತ್ರದ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗಿದೆ. ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರಿಗೆ ಪತ್ರ ಬರೆದಿರುವ ಕಾಮಾಟಿಪುರದ ನಿವಾಸಿಗಳು, ‘ಚಿತ್ರದ ಟ್ರೈಲರ್‌ನಲ್ಲಿ ಈ ಪ್ರದೇಶವನ್ನು ಮುಂಬೈನ ಪ್ರಸಿದ್ಧ ಕೆಂಪು ದೀಪ ಪ್ರದೇಶವನ್ನಾಗಿ ತೋರಿಸಿದ್ದೀರಿ. ಇದು ನಮ್ಮ ಭಾವನೆಗಳಿಗೆ ಘಾಸಿಯುಂಟು ಮಾಡಿದೆ. ಇಲ್ಲಿನ 200 ವರ್ಷಗಳ ಇತಿಹಾಸವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ’ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್‌ ಬಿಡುಗಡೆ ಆಗಿತ್ತು. ತೆಲುಗು ನಿರ್ದೇಶಕ ಎಸ್‌.ಎಸ್‌. ರಾಜಮೌಳಿ, ರಾಮ್‌ ಚರಣ್‌ ಮತ್ತಿತರರು ಅಲಿಯಾ ಅಭಿನಯವನ್ನು ಶ್ಲಾಘಿಸಿದ್ದರು. ಚಿತ್ರವು ಮಹಿಳಾ ಪ್ರಧಾನ ಕಥಾ ಅಂಶವನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿದೆ.

ADVERTISEMENT

ಚಿತ್ರದ ಟ್ರೇಲರ್‌ ವೀಕ್ಷಿಸಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.