ADVERTISEMENT

ಪುಷ್ಪ–2 ಚಿತ್ರ ಬಿಡುಗಡೆ ದಿನಾಂಕ ಮತ್ತೆ ಬದಲು: ಡಿ.5 ಕ್ಕೆ ಸಿನಿಮಾ ತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2024, 11:22 IST
Last Updated 24 ಅಕ್ಟೋಬರ್ 2024, 11:22 IST
<div class="paragraphs"><p>ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ</p></div>

ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ

   

ಚೆನ್ನೈ: ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ‘ಪುಷ್ಪ–2’ ಚಿತ್ರ ಇದೇ ಡಿಸೆಂಬರ್‌ 5 ರಂದು ತೆರೆಕಾಣುತ್ತಿದೆ. 

ಅಲ್ಲು ಅರ್ಜುನ್‌ ಸಿಗರೇಟ್‌, ಗನ್‌ ಹಿಡಿದು ನಿಂತಿರುವ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಸಿನಿಮಾ ಬಿಡುಗಡೆಯಾಗುವ ದಿನಾಂಕ ಘೋಷಿಸಲಾಗಿದೆ. 

ADVERTISEMENT

ನಿರ್ದೇಶಕ ಸುಕುಮಾರ್​ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ಜಗತ್ತಿನಾದ್ಯಂತ ‘ಪುಷ್ಪ 2’ ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಹಿಂದೆ ಹಲವು ಬಾರಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು. ಕೆಲ ದಿನಗಳ ಹಿಂದೆ ಡಿ.6 ರಂದು ಸಿನಿಮಾ ತೆರೆ ಕಾಣಲಿದೆ ಎಂದು ಹೇಳಿತ್ತು. ಆದರೆ ಈಗ ಒಂದು ದಿನ ಮುಂಚಿತವಾಗಿ ಡಿ.5ರಂದೆ ಸಿನಿಮಾ ಬಿಡುಗಡೆಗೆಯಾಗುವುದಾಗಿ ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.