ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿದೆ. ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಂಡಿದೆ.
ಈ ಚಿತ್ರದ ಮುಂದಿನ ಭಾಗದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮನೆ ಮಾಡಿದೆ. ಅದರಂತೆ, ಪ್ರೇಕ್ಷಕರ ನಿರೀಕ್ಷೆ ಮೀರಿ, ‘ಪುಷ್ಪ–ದಿ ರೂಲ್’ ಮೂಡಿ ಬರಲಿದೆ ಎಂಬುದನ್ನು ನಿರ್ಮಾಪಕರು ಹೇಳಿದ್ದಾರೆ.
‘ಪುಷ್ಪ–2’ ಅದ್ಬುತವಾಗಿ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಹಲವು ಚಿತ್ರರಂಗದ ದೊಡ್ಡ ತಾರಾಗಣವಿರಲಿದೆ. ರಕ್ತಚಂದನ ಚೋರರ ಕಥೆಯಾಧರಿತ ಈ ಚಿತ್ರದ ವೀಕ್ಷಕರ ಬಳಗವನ್ನು ಹೆಚ್ಚಿಸುವುದೇ ಈ ಪ್ರಾಜೆಕ್ಟ್ ಗುರಿಯಾಗಿದೆ ಎಂದಿದ್ದಾರೆ.
ನಮ್ಮ ಯೋಜನೆಯಂತೆ ಎಲ್ಲವೂ ನಡೆದರೆ ‘ಪುಷ್ಪ–2’ ಚಿತ್ರದಲ್ಲಿ ಬೇರೆ ಭಾಷೆಗಳ ಹಲವು ಖ್ಟಾತ ನಾಮರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೆಶಕ ಸುಕುಮಾರ್ ನೇತೃತ್ವದಲ್ಲಿ ಚಿತ್ರೀಕರಣಕ್ಕೆ ಸದ್ಯದಲ್ಲೇ ಚಾಲನೆ ಸಿಗಲಿದ್ದು, ತಾರಾಗಣದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಚಿತ್ರ ತಂಡ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.