ನವದೆಹಲಿ: ‘ವಿದೇಶಿ ಭಾಷೆ ಫೀಚರ್ ಫಿಲ್ಮ್’ ವಿಭಾಗದಲ್ಲಿ 2023ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ಗುಜರಾತಿ ಭಾಷೆಯ ‘ಚೆಲ್ಲೊ ಶೋ’ಸಿನಿಮಾ ಆಯ್ಕೆಯಾಗಿದೆ.
ದೇಶದ ವಿವಿಧ ಭಾಷೆಗಳ 13 ಸಿನಿಮಾಗಳು, ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಹೋಗಲು ಪೈಪೋಟಿ ನಡೆಸಿದ್ದವು.
ಇರವಿನ್ ನಿಳಲ್,ರಾಕೆಟ್ರಿ: ದಿ ನಂಬಿ ಎಫೆಕ್ಟ್,ಆರ್‌ಆರ್‌ಆರ್,ದಿ ಕಾಶ್ಮೀರ್ ಫೈಲ್ಸ್,ಝುಂಡ್,ಬದಾಯಿ ಹೊ,ಬ್ರಹ್ಮಾಸ್ತ್ರ,ಅನೇಕ್,ಅಪಾರಜಿತೊ,ಸೆಮ್‌ಕೋರ್,ಆರಿಯಿಪ್ಪು,ಚೆಲ್ಲೊ ಶೋ ಸಿನಿಮಾಗಳು ರೇಸ್‌ನಲ್ಲಿದ್ದವು.
'ರಾಕೆಟ್ರಿ' ಸಿನಿಮಾದ ನಟ ಹಾಗೂ ನಿರ್ದೇಶಕರಾಗಿರುವ ಆರ್.ಮಾಧವನ್ ಅವರು ತಮ್ಮ ಸಿನಿಮಾ ಆಸ್ಕರ್ ಪ್ರಶಸ್ತಿ ರೇಸ್‌ಗೆ ಆಯ್ಕೆಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮುಂಬರುವ ಸಿನಿಮಾ 'ಧೋಖಾ; ರೌಂಡ್ ಡಿ ಕಾರ್ನರ್' ಪ್ರಚಾರದ ವೇಳೆ ಮಾತನಾಡಿದ ಅವರು,ಕಾಶ್ಮೀರ್ ಪೈಲ್ಸ್ ಹಾಗೂ ರಾಕೆಟ್ರಿ ಸಿನಿಮಾಗಳನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಆಸ್ಕರ್‌ಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.
'ನಟ ದರ್ಶನ್ ಕುಮಾರ್ ಕಾಶ್ಮೀರ್ ಫೈಲ್ಸ್ ಪರ ಅಭಿಯಾನ ಆರಂಭಿಸುತ್ತಿದ್ದಾರೆ. ರಾಕೆಟ್ರಿ ಪರವಾಗಿ ನಾನು ಅಭಿಯಾನ ಆರಂಭಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ. 95ನೇ ಅಕಾಡೆಮಿ ಪ್ರಶಸ್ತಿಗೆ (2023ರ ಆಸ್ಕರ್ ಪ್ರಶಸ್ತಿ) ಅಧಿಕೃತ ಪ್ರವೇಶ ಪಡೆದಿರುವಗುಜರಾತಿ ಭಾಷೆಯಚೆಲ್ಲೊ ಶೋ ಸಿನಿಮಾಗೆ ಶುಭವಾಗಲಿ. ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದು, ನಾವೆಲ್ಲ ಹೆಮ್ಮೆ ಪಡುವಂತಾಗಲಿ ಎಂದೂ ಹಾರೈಸಿದ್ದಾರೆ.
ಆಸ್ಕರ್‌ಗೆ ಸಮನಾದ ಸಮಾರಂಭಗಳು ಭಾರತದಲ್ಲಿಯೂ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.