ADVERTISEMENT

‘ಫೈರ್‌ಫ್ಲೈ’ಗೆ ರಚನಾ ನಾಯಕಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 13:26 IST
Last Updated 23 ಜುಲೈ 2024, 13:26 IST
ರಚನಾ ಇಂದರ್‌ 
ರಚನಾ ಇಂದರ್‌    

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ, ವಂಶಿ ನಿರ್ದೇಶನದ ‘ಫೈರ್ ಫ್ಲೈ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದಲ್ಲಿ ವಂಶಿಗೆ ರಚನಾ ಇಂದರ್‌ ಜೋಡಿಯಾಗಿದ್ದಾರೆ. 

ನಿರ್ದೇಶನದ ಜೊತೆಗೆ ವಂಶಿ ಹೀರೊ ಆಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಲವ್ ಮಾಕ್ಟೇಲ್‌’, ‘ಹರಿಕಥೆ ಅಲ್ಲ ಗಿರಿಕಥೆ’, ‘ಲವ್‌ 360’, ‘ತ್ರಿಬಲ್‌ ರೈಡಿಂಗ್’, ‘ನಾಟ್‌ಔಟ್‌’ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ರಚನಾ ಇಂದರ್ ಈ ಸಿನಿಮಾದಲ್ಲಿ ‘ನೇಹಾ’ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ರಚನಾ, ‘ನೇಹಾ ಬದುಕನ್ನು ತುಂಬಾ ಇಷ್ಟಪಡುತ್ತಾಳೆ, ಬದುಕನ್ನು ಅನುಭವಿಸುತ್ತಾಳೆ, ಭವಿಷ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುವಾಕೆಯಲ್ಲ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ’ ಎನ್ನುತ್ತಾರೆ. 

ಚಿತ್ರದಲ್ಲಿ ಮೂಗು ಸುರೇಶ್‌, ಶೀತಲ್‌ ಶೆಟ್ಟಿ, ಸುಧಾರಾಣಿ, ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದು, ದೀಪಾವಳಿಗೆ ‘ಫೈರ್ ಫ್ಲೈ’ ಸಿನಿಮಾ ತೆರೆಕಾಣಲಿದೆ. ವಂಶಿ ನಾಯಕರಾಗಿಯೂ ಈ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಚಿತ್ರಗ್ರಹಣ, ಚರಣ್‌ರಾಜ್ ಸಂಗೀತ ಸಂಯೋಜನೆ ಇದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.