ಬೆಂಗಳೂರು:ನಟ ಯಶ್–ರಾಧಿಕಾ ಪಂಡಿತ್ ದಂಪತಿಗೆ ಹೆಣ್ಣು ಮಗು ಜನಿಸಿದೆ.
ಭಾನುವಾರಬೆಳಿಗ್ಗೆ 6:20ಕ್ಕೆ ನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ ನಟಿ ರಾಧಿಕಾ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ತನಗೆ ‘ಹೆಣ್ಣು ಮಗುವೆಂದರೆ ಇಷ್ಟ’ ಎಂದು ಆಶಯ ವ್ಯಕ್ತಪಡಿಸುವ ಜತೆಗೆ ಹೆಣ್ಣು ಮಗುವಿನ ಪರವಾಗಿ ವೋಟ್‌ಕೂಡ ಮಾಡಿದ್ದರು.
ರಾಧಿಕಾ ಗಂಡು ಮಗುವಿನ ಇಚ್ಛೆ ವ್ಯಕ್ತಪಡಿಸಿದ್ದರು. ದಂಪತಿಗಳು ತಾವು ಇಷ್ಟ ಪಡುವಿನ ಮಗುವಿನ ನಿರೀಕ್ಷೆಯಲ್ಲಿ ಫೋಟೋ ಕ್ಲಿಕ್ಕಿಸಿ, ತಮ್ಮ ಮತ ಯಾರಿಗೆ ಎಂಬುದನ್ನು ಅಭಿಮಾನಿಗಳ ಮುಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಅಭಿಮಾನಿಗಳೂ ಸಹ ರಾಧಿಕಾ ಅವರ ಇನ್‌ಸ್ಟಾಗ್ರಾಂ ಫೋಟೋಗೆ ಪ್ರತಿಕ್ರಿಯಿಸುತ್ತ, ‘ಗಂಡು, ಹೆಣ್ಣು,..ಹೆಣ್ಣು, ಗಂಡು...’ಎಂದು ತಮ್ಮ ನೆಚ್ಚಿನ ನಟರಿಗೆ ಬೆಂಬಲ ಸೂಚಿಸಿದ್ದರು. ’ಕೆಲವರು ಅವಳಿ ಮಕ್ಕಳಾಗಲಿ, ನೀವು ಆರೋಗ್ಯವಾಗಿರಿ,...ಒಳಿತಾಗಲಿ, ಬಾಸ್ ಥರಾ ಬಾಯ್ ಆಗ್ಲಿ..’ ಹೀಗೆ ಸಾಕಷ್ಟು ರೀತಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ತಿಂಗಳು ಮೊಗ್ಗಿನ ಮನಸ್ಸಿನ ಚೆಲುವೆಗೆ ಸೀಮಂತ ನೆರವೇರಿತ್ತು.ವೈದ್ಯರು ಹೆರಿಗೆಗೆ ಡಿ.9ಕ್ಕೆ ದಿನ ನಿಗದಿ ಪಡಿಸಿದ್ದರು.
ಇದನ್ನೂ ನೋಡಿ:ಸೀಮಂತದ ಸಂಭ್ರಮದಲ್ಲಿ ಯಶ್–ರಾಧಿಕಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.