ADVERTISEMENT

ತಂದೆಗೆ ಬ್ಯಾಡ್ ಬಾಯ್ ಎಂದ ಯಶ್ ಪುತ್ರ ಯಥರ್ವ: ಕ್ಯೂಟ್ ವಿಡಿಯೊ ಹಂಚಿಕೊಂಡ ರಾಧಿಕಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2022, 10:47 IST
Last Updated 17 ಜುಲೈ 2022, 10:47 IST
ಯಥರ್ವ
ಯಥರ್ವ   

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಭರ್ಜರಿ ಯಶಸ್ಸಿನ ನಂತರ ಸದ್ಯ ವಿಶ್ರಾಂತಿಯಲ್ಲಿರುವ ನಟ ಯಶ್ ಅವರು ಫ್ಯಾಮಿಲಿ ಜೊತೆ ಹೆಚ್ಚುಕಾಲ ಕಳೆಯುತ್ತಾರೆ. ಅಲ್ಲದೇ ಅವರು ತಮ್ಮ ಇಬ್ಬರು ಮುದ್ದಾದ ಮಕ್ಕಳಾದ ಐರಾ ಹಾಗೂ ಯಥರ್ವ್ ಅವರಿಗೆ ಟೈಮ್ ಕೊಡುವುದನ್ನು ತಪ್ಪಿಸುವುದಿಲ್ಲ.

ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಯಶ್ ಹಾಗೂಅವರ ಮಗನಬಗ್ಗೆ ಒಂದು ಕ್ಯೂಟ್ ವಿಡಿಯೊ ಹಂಚಿಕೊಂಡಿದ್ದು ಅದು ವೈರಲ್ ಆಗಿದೆ.

‘ನೋಡಿ ಕಡೆಗೂ ಫೈನಲ್ ಜಡ್ಜಮೆಂಟ್ ಹೊರಬಿತ್ತು’ ಎಂದು ಯಶ್ ಪುತ್ರ ಯಶ್ ಅವರಿಗೆ ‘ಬ್ಯಾಡ್ ಬಾಯ್’ ಎಂದು ಹೇಳುವ ವಿಡಿಯೊ ಅನ್ನು ಅವರು ಹಂಚಿಕೊಂಡಿದ್ದಾರೆ.

ADVERTISEMENT

ಯಥರ್ವ್ ತಂದೆ ಬಗ್ಗೆ ಅದೇಕೋ ಕೋಪಗೊಂಡು ‘ಅಮ್ಮನೇ ಬೆಸ್ಟ್, ನೀನು ಬ್ಯಾಡ್ ಬಾಯ್’ ಎಂದು ಹೇಳಿದ್ದಾನೆ. ಇದಕ್ಕೆ ಯಶ್ ‘ಹೋಗಲೇ ನೀನೊಬ್ಬ ಉಳಿದಿದ್ದು ನೋಡು ಹಾಗೇ ಹೇಳೋದು’ ಎಂದು ಮಗನಿಗೆ ಹೇಳುವ ಕ್ಯೂಟ್ ವಿಡಿಯೊವನ್ನು ಸುಮಾರು 12 ಲಕ್ಷ ಜನ ನೋಡಿದ್ದಾರೆ.

ಯಶ್ ಅವರು ಕೆಜಿಎಫ್ ಯಶಸ್ಸಿನ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರವನ್ನೇ ಮಾಡಲಿದ್ಧಾರೆ ಎನ್ನಲಾಗಿದ್ದು, ಖ್ಯಾತ ನಿರ್ದೇಶಕ ಶಂಕರ್ ಅವರು ಯಶ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿ ಹಬ್ಬಿದೆ.

ಇನ್ನುಸದ್ಯ ನಟನೆಯಿಂದ ದೂರ ಉಳಿದಿರುವ ರಾಧಿಕಾ, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದು, ಮಕ್ಕಳಾದ ಐರಾ ಮತ್ತು ಯಥರ್ವ್‌ ಜೊತೆ ಬ್ಯುಸಿ ಆಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಾಧಿಕಾ, ಯಶ್‌ ಮತ್ತು ಮಕ್ಕಳ ಜೊತೆಗಿನ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.