ADVERTISEMENT

ಐರಾ ಜತೆಗೆ ಇನ್ನೊಂದು ಮಗು ಬೇಕು- ಯಶ್ ದಂಪತಿ ಆಶಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 12:59 IST
Last Updated 26 ಜೂನ್ 2019, 12:59 IST
   

ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಸಿಹಿ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.ಯಶ್- ರಾಧಿಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಆಶಯ ವ್ಯಕ್ತ ಪಡಿಸುವ ವಿಡಿಯೊ ಈ ಟ್ವೀಟ್‌ನಲ್ಲಿದೆ.


ಕಳೆದ ಭಾನುವಾರ ಯಶ್ ಮಗಳ ನಾಮಕರಣ ಶಾಸ್ತ್ರ ನಡೆದಿತ್ತು.ಐರಾ ಯಶ್ ಎಂದು ಮಗಳಿಗೆ ನಾಮಕರಣ ಮಾಡಿದ್ದರು ಈತಾರಾ ದಂಪತಿ.

ಟ್ವೀಟ್‌ನಲ್ಲಿYGF 2: Chapter 2 ಎಂದು ಇದೆ. KGF ಗೊತ್ತು ಏನಪ್ಪಾ ಇದು YGF ಅಂತೀರಾ? YGF 2: Yash Going to be Father for Second Time ಎಂಬುದು ಇದರರ್ಥ!

ADVERTISEMENT

ಇದೇ ವಿಡಿಯೊವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಶುಭಾಶಯದ ಮಳೆಗೆರೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.