ಚೆನ್ನೈ: ‘ಕಾಂಚನ’ ಸಿನಿಮಾ ಖ್ಯಾತಿಯ ತಮಿಳು ನಟ ರಾಘವ ಲಾರೆನ್ಸ್ ಅವರು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಘವ ಲಾರೆನ್ಸ್ ನಟನೆಯ 25ನೇ ಚಿತ್ರವನ್ನು ಘೋಷಣೆ ಮಾಡಲಾಗಿದ್ದು, ಚಿತ್ರಕ್ಕೆ 'ಕಾಲ ಭೈರವ' ಎಂದು ಹೆಸರಿಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
48ನೇ ವಸಂತಕ್ಕೆ ಕಾಲಿಟ್ಟ ಲಾರೆನ್ಸ್ ಕಾಲಿಟ್ಟಿದ್ದಾರೆ.
'ಕಾಲ ಭೈರವ' ಚಿತ್ರಕ್ಕೆ ಕಿಲಾಡಿ ಹಾಗೂ ರಾಕ್ಷಸುಡು ಖ್ಯಾತಿಯ ರಮೇಶ್ ವರ್ಮಾ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕ ವರ್ಮಾ, ಚಿತ್ರವು ಆ್ಯಕ್ಷನ್ ಸನ್ನಿವೇಶಗಳೊಂದಿಗೆ ಮೂಡಿಬರಲಿದ್ದು, ಸೂಪರ್ ಹಿರೋ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
‘ನನ್ನ ಹುಟ್ಟುಹಬ್ಬದಂದು ಚಿತ್ರದ ಹೆಸರು ಘೋಷಿಸಿರುವುದು ನನಗೆ ಸಂತೋಷ ತಂದಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಸದಾ ಇರಲಿ‘ ಎಂದು ನಟ ರಾಘವ ಲಾರೆನ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕೋನೇರು ಸತ್ಯನರತನ ಅವರ ಎ ಸ್ಟುಡಿಯೋಸ್ ಎಲ್ಎಲ್ಪಿ ಹಾಗೂ ನೀಲಾದ್ರಿ ಪ್ರೊಡಕ್ಷನ್ಸ್ ಮತ್ತು ಹಾವಿಶ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.