ADVERTISEMENT

ಅಶ್ಲೀಲ ಚಿತ್ರ ನಿರ್ಮಾಣದಿಂದ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದ ರಾಜ್‌ ಕುಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2021, 12:45 IST
Last Updated 22 ಜುಲೈ 2021, 12:45 IST
ರಾಜ್‌ ಕುಂದ್ರಾ
ರಾಜ್‌ ಕುಂದ್ರಾ   

ಮುಂಬೈ: ರಾಜ್‌ ಕುಂದ್ರಾ ಅವರು ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಆ್ಯಪ್‌ಗಳ ಮೂಲಕ ಪ್ರಸಾರದಿಂದ ದಿನಕ್ಕೆ ₹6 ರಿಂದ 8 ಲಕ್ಷ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೋಲಿಸರು ಮಾಹಿತಿ ನೀಡಿದ್ದಾರೆ.

ಭಾರತದ ಕಾನೂನಿನ ಕಣ್ತಪ್ಪಿಸಲು ವಿದೇಶಿ ನೋಂದಾಯಿತ ಕಂಪನಿ ಮೂಲಕ ಅಶ್ಲೀಲ ಚಿತ್ರಗಳ ವ್ಯವಹಾರ ನಡೆಸುತ್ತಿದ್ದರು ಎಂಬುದನ್ನು ಪತ್ತೆಹಚ್ಚಲಾಗಿದೆ. ಅಶ್ಲೀಲ ಚಿತ್ರ ನಿರ್ಮಾಣದಿಂದ ಇದುವರೆಗೆ ಸುಮಾರು ₹7.50 ಕೋಟಿ ಮೊತ್ತದಷ್ಟು ಸಂಗ್ರಹವಾಗಿದ್ದು, ಅದಕ್ಕೆ ಸಂಬಂಧಿಸಿದ ವಿವಿಧ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆಎಂದುಮುಂಬೈನ ಜಂಟಿ ಪೊಲೀಸ್‌ ಆಯುಕ್ತ ಮಿಲಿಂದ್‌ ಭಾರಂಬೆ ತಿಳಿಸಿದ್ದಾರೆ.

ಇಲ್ಲಿಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅವುಗಳನ್ನು ವೀಟ್ರಾನ್ಸ್‌ಫರ್‌ ಅಪ್ಲಿಕೇಷನ್‌ ಮೂಲಕ ಲಂಡನ್‌ಗೆ ಕಳುಹಿಸುತ್ತಿದ್ದರು. ಅಲ್ಲಿ ಕುಂದ್ರಾ ಅವರ ಸೋದರ ಸಂಬಂಧಿಗೆ ಸೇರಿದ ಕೆನ್ರಿನ್‌ ಕಂಪನಿಯ ಹಾಟ್‌ಶಾಟ್ಸ್‌ ಅಪ್ಲಿಕೇಷನ್‌ಗೆ ಚಿತ್ರಗಳನ್ನು ಅಪ್‌ಲೋಡ್‌ ಮಾಡಿ ಪ್ರಸಾರ ಮಾಡುತ್ತಿದ್ದರು. ಆದರೆ ಮುಂಬೈನಲ್ಲಿದ್ದ ರಾಜ್‌ ಕುಂದ್ರಾ ಮತ್ತು ಅವರ ತಂಡ ಹಾಟ್‌ಶಾಟ್ಸ್‌ಆ್ಯಪ್‌ಗೆ ನೇರವಾಗಿಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಿರಲಿಲ್ಲ. ಈ ಎಲ್ಲಾ ಅಂಶಗಳು ವಾಟ್ಸ್‌ಆ್ಯಪ್‌ ಚಾಟ್‌ ಮೂಲಕ ಬಹಿರಂಗಗೊಂಡಿವೆ ಎಂದು ತಿಳಿಸಿದರು.

ADVERTISEMENT

ಹಾಟ್‌ಶಾಟ್ಸ್‌ ಅಪ್ಲಿಕೇಷನ್‌ ಬಳಕೆದಾರರಿಂದ ಕುಂದ್ರಾ ಅವರಿಗೆ ದಿನಕ್ಕೆ ₹6 ರಿಂದ 8ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಈ ಆ್ಯಪ್‌ ಆ್ಯಪ್ ಸ್ಟೋರ್‌ ಮತ್ತು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿತ್ತು. ಕೆಲ ತಿಂಗಳುಗಳ ಹಿಂದೆ ಹಾಟ್‌ಶಾಟ್ಸ್‌ನಲ್ಲಿಅಶ್ಲೀಲ ಚಿತ್ರಗಳ ಪ್ರಸಾರ ಇರುವುದನ್ನು ಗಮನಿಸಿದ ಆ್ಯಪಲ್‌ ಕಂಪನಿಯವರು ಆ್ಯಪ್ ಸ್ಟೋರ್‌ನಿಂದ ಹಾಟ್‌ಶಾಟ್ಸ್‌ ಆ್ಯಪ್‌ ಅನ್ನು ತೆಗೆದುಹಾಕಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ರಾಜ್‌ ಕುಂದ್ರಾ ಸೇರಿದಂತೆ ಅವರ ಆಪ್ತ ರೆಯಾನ್‌ ಥಾರ್ಪೆ, ನಿರ್ಮಾಪಕರಾದ ರೋಮಾ ಖಾನ್ ಮತ್ತು ಅವರ ಪತಿ, ನಟಿ ಗೆಹ್ನಾ ವಶಿಷ್ಠ, ನಿರ್ದೇಶಕ ತನ್ವೀರ್ ಹಶ್ಮಿ ಮತ್ತು ಉಮೇಶ್ ಕಾಮತ್ (ಕುಂದ್ರಾ ಅವರ ಸಂಸ್ಥೆಯ ವ್ಯವಹಾರ ನೋಡಿಕೊಳ್ಳುತ್ತಿದ್ದರು) ಅವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.