ADVERTISEMENT

ಸೈಬರ್‌ ಪೊಲೀಸರಿಗೆ ದೂರು: ಹಿಂದಿಯಲ್ಲಿ ‘ರಾಜಾಹುಲಿ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 20:22 IST
Last Updated 24 ಡಿಸೆಂಬರ್ 2018, 20:22 IST
ಕೆ. ಮಂಜು
ಕೆ. ಮಂಜು   

ಬೆಂಗಳೂರು: ‘ನಟಯಶ್ ಅಭಿನಯದ 'ರಾಜಾಹುಲಿ' ಸಿನಿಮಾವನ್ನು ಅನುಮತಿ ಇಲ್ಲದೇ ಹಿಂದಿಗೆ ಡಬ್‌ ಮಾಡಿರುವ ಕಿಡಿಗೇಡಿಗಳು, ಆ ಸಿನಿಮಾವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿ ನನಗೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ’ ಎಂದು ನಿರ್ಮಾಪಕ ಕೆ. ಮಂಜು, ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.‌

ನಗರ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿರುವ ಸೈಬರ್ ಕ್ರೈಂ ಠಾಣೆಗೆ ಸೋಮವಾರ ಭೇಟಿ ನೀಡಿ ಪೊಲೀಸರಿಗೆ ದೂರು ನೀಡಿರುವ ಅವರು, ಡಬ್ ಮಾಡಿರುವವರನ್ನು ಬಂಧಿಸುವಂತೆ ಒತ್ತಾಯಿಸಿದರು.

‘2013ರಲ್ಲಿ ಗುರು ದೇಶಪಾಂಡೆ ನಿರ್ದೇಶನದಲ್ಲಿ ರಾಜಾಹುಲಿ ಸಿನಿಮಾ ನಿರ್ಮಿಸಲಾಗಿತ್ತು. ಅದನ್ನು ಹಿಂದಿ, ತೆಲುಗು, ತಮಿಳಿನಲ್ಲಿ ಡಬ್‌ ಮಾಡಲು ಹಲವರು ಅನುಮತಿ ಕೇಳಿದ್ದರು. ನಾನು ಕೊಟ್ಟಿರಲಿಲ್ಲ. ಕೆಜಿಎಫ್ ಸಿನಿಮಾ ಬಿಡುಗಡೆ ಬಳಿಕ ಹಕ್ಕು ನೀಡಿದರಾಯಿತು ಎಂದು ಸುಮ್ಮನಾಗಿದ್ದೆ. ಆದರೆ, ನನ್ನ ಅನುಮತಿ ಪಡೆಯದೆ ಈಗಾಗಲೇ ಸಿನಿಮಾವನ್ನು ಹಿಂದಿಗೆ ಡಬ್‌ ಮಾಡಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.