ADVERTISEMENT

‘ಓಲ್ಡ್ ಮಾಂಕ್‍’ನಲ್ಲಿ ರಾಜೇಶ್‍

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 9:14 IST
Last Updated 27 ಡಿಸೆಂಬರ್ 2020, 9:14 IST
ನಟ ರಾಜೇಶ್‌
ನಟ ರಾಜೇಶ್‌   

ಓಲ್ಡ್ ಮಾಂಕ್‍ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಿರಿಯ ನಟ ರಾಜೇಶ್‍. ವಿಶೇಷ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ ಚಿತ್ರದ ನಟ, ನಿರ್ದೇಶಕ ಶ್ರೀನಿ. ಚಿತ್ರರಂಗದಿಂದ ದೂರ ಉಳಿದಿದ್ದ ರಾಜೇಶ್‍ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿ ಎಂದಿದ್ದಾರೆ ಶ್ರೀನಿ.

ಸಿನಿಮಾದ ಕಥೆ ಕೇಳಿದ ಬಳಿಕ ರಾಜೇಶ್‍ ನಟಿಸಲು ಒಪ್ಪಿದ್ದಾರೆ. ಅವರಿಗೀಗ 88 ವರ್ಷ ವಯಸ್ಸು. ಜನವರಿಯಲ್ಲಿ ಶೂಟಿಂಗ್‍ ನಡೆಯಲಿದೆ. ಈಗಾಗಲೇ ಚಿತ್ರದ ಶೇ 80ರಷ್ಟು ಕೆಲಸಗಳು ಮುಗಿದಿವೆ. ಕೆಲವು ಹಾಡುಗಳು ಮತ್ತು ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. ಅದನ್ನು ಜನವರಿಯಲ್ಲಿ ಮುಗಿಸುತ್ತೇವೆ ಎಂದರು ಶ್ರೀನಿ.

ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ಸಿಹಿ ಕಹಿ ಚಂದ್ರು,ಎಸ್ ನಾರಾಯಣ್, ಆರ್.ಟಿ. ರಮಾ, ಡಿಂಗ್ರಿ ನಾಗರಾಜ್ ತಾರಾಗಣದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.