ಬೆಂಗಳೂರು: ನಟ ಹಾಗೂ ಚಿತ್ರನಿರ್ಮಾಪಕಜಕ್ಕಿ ಬಗ್ನಾನಿಯೊಂದಿಗೆನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್ ಮಾಡುತ್ತಿರುವುದು ತಿಳಿದಿರುವ ವಿಚಾರ. ಅವರಿಬ್ಬರ ಮದುವೆಕುರಿತ ಗಾಸಿಪ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇದ್ದವು.
ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ ಎಂಬ ಅಧಿಕೃತ ಸುದ್ದಿ ಹೊರಬಿದ್ದಿದೆ. ರಾಕುಲ್ ಹಾಗೂ ಜಕ್ಕಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ದಿನಾಂಕ ಹಾಗೂ ಜಾಗವನ್ನು ಅಂತಿಮಗೊಳಿಸಲಾಗುತ್ತಿದೆ. ರಾಕುಲ್ ಅವರೇಮದುವೆ ದಿನದ ಬಗ್ಗೆ ಎಲ್ಲರಿಗೂ ತಿಳಿಸಲಿದ್ದಾರೆ ಎಂದು ರಾಕುಲ್ ಸಹೋದರ ಅಮನ್ ಸಿಂಗ್ ಖಾಸಗಿ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.
ಇನ್ನು ಮದುವೆ ವಿಚಾರವನ್ನು ಜಕ್ಕಿ ಬಗ್ನಾನಿ ತಂದೆ ವಾಸು ಅವರು ಕೂಡ ಖಚಿತಪಡಿಸಿದ್ದು, ಮದುವೆ ತಯಾರಿ ನಡೆದಿದೆ ಎಂದು ತಿಳಿಸಿದ್ದಾರೆ.
ಕೋಲ್ಕತ್ತ ಮೂಲದ 36 ವರ್ಷದ ಜಕ್ಕಿ ಬಗ್ನಾನಿ ಬಾಲಿವುಡ್ ನಟ ಹಾಗೂ ನಿರ್ಮಾಪಕ. 2001 ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.
‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಹಲವುಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಅತ್ತ ರಾಕುಲ್ ಕೂಡ ಅನೇಕ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು ಆ ಸಿನಿಮಾಗಳು ಮುಗಿಯಲು ಬಂದಿದ್ದು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಕುಲ್ ಅವರ 'ಡಾಕ್ಟರ್ ಜಿ' ಹಾಗೂ 'ತ್ಯಾಂಕ್ ಗಾಡ್', 'ಛತ್ರಿವಾಲಿ' ಸಿನಿಮಾಗಳು ಇನ್ನೇನು ಬಿಡುಗಡೆಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.