ಬೆಂಗಳೂರು: ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಬೇಡಿಕೆ ನಟಿಯಾಗಿ ಬೆಳೆದಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಅಪಾರ ಅಭಿಮಾನಿಗಳನ್ನು ಹೊಂದಿರುವ ರಾಕುಲ್ ಪ್ರೀತ್ ಸಿಂಗ್‌ಗೆ ಇಂದು 31 ನೇ ಜನ್ಮದಿನದ ಸಂಭ್ರಮ.
ಇದೇ ವೇಳೆ ಇಷ್ಟು ದಿನ ರಾಕುಲ್ ಪ್ರೀತ್ ಸಿಂಗ್ ಇನಿಯಯಾರು? ಎಂದು ಕೇಳಿ ಬರುತ್ತಿದ್ದ ರೂಮರ್‌ಗಳಿಗೆ ತೆರೆ ಬಿದ್ದಿದ್ದು, ರಾಕುಲ್ ಇನಿಯಯಾರೆಂಬುದು ಕಡೆಗೂ ಇಂದು ಬಹಿರಂಗವಾಗಿದೆ.
ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್‌ನಾನಿ ಅವರೇ ರಾಕುಲ್ ಅವರ ಹುಡುಗ. ಇಷ್ಟು ದಿನ ಗುಟ್ಟಾಗಿದ್ದ ಈ ವಿಷಯಜಕ್ಕಿ ಅವರಿಂದಲೇ ಬಹಿರಂಗವಾಗಿದೆ.
ಪಾರ್ಕ್‌ನಲ್ಲಿ ರಾಕುಲ್ ಹಾಗೂ ಜಕ್ಕಿ ಕೈ ಕೈ ಹಿಡಿದುಕೊಂಡು ಹೋಗುತ್ತಿರುವ ಫೋಟೊ ಹಂಚಿಕೊಂಡು ಜಕ್ಕಿ ರಾಕುಲ್‌ಗೆ ಜನ್ಮದಿನದ ಶುಭಾಶಯ ಕೋರಿದ್ದರು. ಕೆಲ ಹೊತ್ತಿನ ನಂತರ ಇದೇ ಚಿತ್ರವನ್ನು ಹಂಚಿಕೊಂಡು ರಾಕುಲ್, ತಮ್ಮ ಸಂಬಂಧವನ್ನು ಖಚಿತಪಡಿಸಿದರು. ಈ ಇಬ್ಬರೂ ಕ್ಯೂಟ್ ಜೋಡಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
ಕೋಲ್ಕತ್ತ ಮೂಲದ 36 ವರ್ಷದ ಜಕ್ಕಿ ಬಗ್‌ನಾನಿ ಬಾಲಿವುಡ್ ನಟ ಹಾಗೂ ನಿರ್ಮಾಪಕ. 2001 ರಲ್ಲಿ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ. ‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.