ADVERTISEMENT

ರಾನಾ ಜೊತೆ ರಾಕುಲ್‌ ಡೇಟಿಂಗ್‌?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:39 IST
Last Updated 11 ನವೆಂಬರ್ 2019, 19:39 IST
ರಕುಲ್‌ ಪ್ರೀತ್‌ ಸಿಂಗ್‌
ರಕುಲ್‌ ಪ್ರೀತ್‌ ಸಿಂಗ್‌   

ಬ್ಯುಸಿ ನಟಿಯರ ಸಾಲಿನಲ್ಲಿ ಸದ್ಯ ರಾಕುಲ್‌ ಪ್ರೀತ್‌ ಸಿಂಗ್‌ ಗುರುತಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದು, ಇತ್ತೀಚೆಗೆ ಬಾಲಿವುಡ್‌ನಲ್ಲಿ ಅರ್ಜುನ್‌ ಕಪೂರ್‌ ಜೊತೆಗಿನ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಮುಂದಿನ ತಿಂಗಳಲ್ಲಿ ಆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ‘ಮರ್‌ಜಾವಾ’ ಸಿನಿಮಾದಲ್ಲೂ ಅವರು ನಟಿಸಿದ್ದಾರೆ .

ಇತ್ತೀಚೆಗೆ ರಾಕುಲ್‌ ಪ್ರೀತ್‌ ಸಿಂಗ್‌ ಹೆಸರು ನಟ ರಾನಾ ದಗ್ಗುಬಾಟಿ ಜೊತೆ ಕೇಳಿಬರುತ್ತಿತ್ತು. ಅವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬಂತಹ ಮಾತುಗಳು ಆಗಾಗ್ಗೆ ಪ್ರಚಾರವಾಗುತ್ತಿದ್ದವು. ‘ಮರ್‌ಜಾವಾ’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಈ ಬಗ್ಗೆ ಪ್ರಶ್ನೆಗಳು ರಾಕುಲ್‌ ಎದುರಾಗಿವೆ. ಆಗ ‘ಇದೆಲ್ಲಾ ಗಾಳಿಸುದ್ದಿ’ ಎಂದು ನಿರಾಕರಿಸಿದ್ದಾರೆ.

‘ರಾನಾ ದಗ್ಗುಬಾಟಿ ಜೊತೆ ಡೇಟಿಂಗ್‌ ನಡೆಸುತ್ತಿದ್ದೀರಾ?’ ಎಂಬ ಪ್ರಶ್ನೆಗೆ ‘ಓಹ್‌ ಮೈ ಗಾಡ್‌, ನಾವಿಬ್ಬರೂ ಅಕ್ಕಪಕ್ಕದ ಮನೆಯವರು ಮೇಲಾಗಿ ಕ್ಲೋಸ್‌ಫ್ರೆಂಡ್ಸ್‌. ನಾನು ಸಿನಿಮಾ ಕ್ಷೇತ್ರಕ್ಕೆ ಬಂದಾಗಿನಿಂದ ರಾನಾ ನನ್ನ ಬೆಸ್ಟ್‌ ಫ್ರೆಂಡ್‌. ನಾನಿನ್ನೂ ಏಕಾಂಗಿ. ಸದ್ಯಕ್ಕೆ ಮದುವೆ, ರಿಲೇಷನ್‌ಶಿಪ್‌ ಬಗ್ಗೆ ಯೋಚಿಸಲು ಸಮಯವಿಲ್ಲ’ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.